ಗುರುವಾರ , ನವೆಂಬರ್ 26, 2020
22 °C

ನಟಿ ಕಾಜಲ್‌ ಅಗರ್‌ವಾಲ್‌‌ ಮದುವೆ ಮೆಹಂದಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಕಾಜಲ್‌ ಅಗರ್‌ವಾಲ್‌ ಅವರ ವಿವಾಹ ಸಂಬಂಧಿಸಿದ ಸಂಪ್ರದಾಯಗಳು ಈಗಾಗಲೇ ಆರಂಭಗೊಂಡಿವೆ. 

ಅವರ ಅರಶಿನ - ಮದರಂಗಿ ಶಾಸ್ತ್ರ ಗುರುವಾರ ನೆರವೇರಿದೆ. ಕೊರೋನಾ ಕಾರಣಕ್ಕಾಗಿ ಅವರ ಆಪ್ತರು ಮತ್ತು ಕುಟುಂಬದ ಸದಸ್ಯರು ಮಾತ್ರ ಸಮಾರಂಭದಲ್ಲಿ ಹಾಜರಿದ್ದರು. 

ಕೈಗೆ ಮದರಂಗಿ ಹಾಕಿಕೊಂಡ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್‌ ಅವರ ಮದುವೆ ಅ. ೩೦ರಂದು ಉದ್ಯಮಿ ಗೌತಮ್‌ ಕಿಚ್ಲು ಅವರೊಂದಿಗೆ ನಡೆಯಲಿದೆ.

ಕಾಜಲ್‌ ಅವರು ಕಮಲ್‌ಹಸನ್‌ ಅವರ ‘ಇಂಡಿಯನ್‌’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರವನ್ನು ಶಂಕರ್‌ ನಿರ್ದೇಶಿಸುತ್ತಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು