ಗುರುವಾರ , ಡಿಸೆಂಬರ್ 3, 2020
23 °C

ಕಮಲ್‌ ಹಾಸನ್‌ ‘ವಿಕ್ರಮ್‌’ ಚಿತ್ರದ ಟೀಸರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಕಮಲ್‌ ಹಾಸನ್‌ ಅವರು ತಮ್ಮ ಹೊಸ ಚಿತ್ರ ‘ವಿಕ್ರಮ್‌’ ಚಿತ್ರದ ಟೀಸರನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ. 

ಸಸ್ಪೆನ್ಸ್‌, ಥ್ರಿಲ್ಲರ್‌ ಕತೆಯಂತಿರುವ ಈ ಚಿತ್ರದ ಟೀಸರೇ ತುಂಬಾ ಕುತೂಹಲ ಮೂಡಿಸುತ್ತಿದೆ. ಹಳೇ ಕಾಲದ ಬಂಗಲೆಯೊಂದರ ಒಳಗಿರುವ ಕಮಲ್‌ ಹಾಸನ್‌ (ವಿಕ್ರಮ್‌) ಮನೆಯ ಕಪಾಟು, ಕಿಟಕಿ ಸಂದಿ, ಮೇಜಿನ ಅಡಿ ಭಾಗ ಶಸ್ತ್ರಾಸ್ತ್ರಗಳನ್ನು ಅಡಗಿಸಿಡುತ್ತಾರೆ. ಒಂದಿಷ್ಟು ಪೊಲೀಸರು, ಗಣ್ಯರನ್ನು ಊಟಕ್ಕಾಗಿ ಕರೆದು ಅಣಿಗೊಳಿಸುತ್ತಾರೆ. ಊಟ ನಡೆಯುತ್ತಿದ್ದಂತೆಯೇ ಟೇಬಲ್‌ ಅಡಿಯಿಂದ ಎರಡು ಕೊಡಲಿಯನ್ನು ಕಮಲ್‌ ಹಾಸನ್‌ ತೆಗೆಯುತ್ತಾರೆ. ಅಲ್ಲಿಗೆ ದೃಶ್ಯ ಕಟ್‌ ಆಗುತ್ತದೆ. 

ಒಂದು ಕಾಲದಲ್ಲಿ ಈ ಜಾಗದಲ್ಲಿ ದೆವ್ವ ವಾಸವಾಗಿತ್ತು ಎಂಬ ಬರಹ ಮೂಡುತ್ತದೆ. ಶೂಟಿಂಗ್‌ ಶೀಘ್ರ ಆರಂಭವಾಗಲಿದೆ ಎಂಬ ಮಾಹಿತಿ ಮೂಡುತ್ತದೆ. 

ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ ನ್ಯಾಷನಲ್‌ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಲೋಕೇಶ್ ಕನಗರಾಜ್ ಚಿತ್ರದ ನಿರ್ದೇಶಕರು. ಅನಿರುದ್ಧ್‌ ಅವರ ಸಂಗೀತವಿದೆ. ಕಮಲ್‌ ಹಾಸನ್‌ ಅವರ 66ನೇ ಹುಟ್ಟುಹಬ್ಬದಂದು ಈ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಅನಿರುದ್ಧ ಸಂಗೀತ ನೀಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು