

ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರೂರಾದ ಕನಕಪುರದಲ್ಲಿ 2026ರ ಕನಕೋತ್ಸವ ಅದ್ಧೂರಿಯಾಗಿ ನಡೆದಿದೆ.
ಚಿತ್ರ: ಇನ್‌ಸ್ಟಾಗ್ರಾಂ

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹೋದರಿಬ್ಬರು ಸೇರಿಕೊಂಡು ಆಯೋಜಿಸಿದ್ದ ಕನಕೋತ್ಸವದ ಸಮಾರಂಭಕ್ಕೆ ಚಂದನವನದ ಜನಪ್ರಿಯ ತಾರೆಯರು ಭಾಗಿಯಾಗಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ

ಜನವರಿ 28ರಿಂದ ಫೆಬ್ರುವರಿ 1ರವರೆಗೆ ಕನಕಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕೋತ್ಸವದಲ್ಲಿ ಚಂದನವನದ ತಾರೆಯರ ಸಮಾಗಮವಾಗಿದೆ.
ಚಿತ್ರ: ಇನ್‌ಸ್ಟಾಗ್ರಾಂ

ಈ ಕಾರ್ಯಕ್ರಮಕ್ಕೆ ನಟ ಶಿವರಾಜ್‌ಕುಮಾರ್, ಉಪೇಂದ್ರ, ರಚಿತಾ ರಾಮ್, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ನಿರೂಪಕಿ ಅನುಶ್ರೀ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ

ನೇರಳೆ ಬಣ್ಣದ ಉಡುಪು ಧರಿಸಿ ನಿರೂಪಕಿ ಅನುಶ್ರೀ ಅವರು ಕನಕೋತ್ಸವದಲ್ಲಿ ಭಾಗಿಯಾಗಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ

ಜನಪ್ರಿಯ ಬಹುಭಾಷಾ ಹಿನ್ನೆಲೆ ಗಾಯಕ ಮತ್ತು ಸಂಗೀತ ನಿರ್ದೇಶಕ ವಿಜಯ್ ಪ್ರಕಾಶ್ ಅವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ

ವಿಶೇಷವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಜಾನಪದ ಕಲಾವಿದೆ ಮಂಗ್ಲಿ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಚಿತ್ರ: ಇನ್‌ಸ್ಟಾಗ್ರಾಂ

ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ, ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಅವರು ಹಾಡು ಹಾಡಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡ ಚಿತ್ರರಂಗದ ಹಿನ್ನಲೆ ಗಾಯಕ ನವೀನ್ ಸಜ್ಜು ಹಾಡು ಹಾಡಿದ್ದರು. ಜೊತೆಗೆ ಡಿಕೆ ಶಿವಕುಮಾರ್ ಅವರ ಪತ್ನಿ ಜೊತೆಗೆ ನೃತ್ಯ ಮಾಡಿ ಮನರಂಜಿಸಿದರು.
ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಗಾಯಕ ಹಾಗೂ ಬಿಗ್‌ಬಾಸ್ ಸೀಸನ್ 5ರ ವಿಜೇತ ಚಂದನ್ ಶೆಟ್ಟಿ ಅವರು ಕನಕೋತ್ಸವದಲ್ಲಿ ಹಾಡು ಹಾಡಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.