ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಗನಾ ಮೇಲೆ ಹಲ್ಲೆ: ಗೂಂಡಾಗಿರಿಯನ್ನು ಕೊನೆಗಾಣಿಸಬೇಕಿದೆ- ರವೀನಾ ಟಂಡನ್ ಪೋಸ್ಟ್

Published 9 ಜೂನ್ 2024, 7:46 IST
Last Updated 9 ಜೂನ್ 2024, 7:46 IST
ಅಕ್ಷರ ಗಾತ್ರ

ಬೆಂಗಳೂರು: ಚಂಡೀಗಡ ವಿಮಾನ ನಿಲ್ದಾಣದಲ್ಲಿ ನೂತನ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ಮೇಲೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಬಗ್ಗೆ ಪರ ವಿರೋಧ ಅಭಿಪ್ರಾಯ ಕೇಳಿ ಬರುತ್ತಿವೆ.

ಆದರೆ, ಸಿನಿಮಾ ಕ್ಷೇತ್ರದಿಂದ ಅನೇಕರು ಕಂಗನಾ ಅವರಿಗೆ ಬೆಂಬಲ ಸೂಚಿಸಿ, ಈ ರೀತಿ ಹಲ್ಲೆ ಮಾಡುವುದು ತಪ್ಪು ಎಂದು ಖಂಡಿಸಿದ್ದಾರೆ.

ಇದೀಗ ಇನ್ನೊಬ್ಬ ನಟಿ ರವೀನಾ ಟಂಡನ್ ಅವರೂ ಸಹ ಕಂಗನಾಗೆ ಬೆಂಬಲ ಸೂಚಿಸಿ ಹಲ್ಲೆ ನಡೆಸಿದ್ದನ್ನು ಖಂಡಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು,

ಸಾರ್ವಜನಿಕ ಜೀವನ ನಿರಂತರವಾಗಿರುವ ಈ ಜಗತ್ತಿನಲ್ಲಿ, ಮಹಿಳಾ ಸಾಧಕರು ಕೂಡ ಮನುಷ್ಯರು ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ. ಕೇವಲ ಅವರ ಖ್ಯಾತಿಗಾಗಿ ಅವರನ್ನು ಅವಹೇಳನ ಮಾಡುವುದು ಅನ್ಯಾಯ ಮತ್ತು ಹಾನಿಕಾರಕವಾಗಿದೆ. ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಹಿಂಸಾಚಾರ ಮತ್ತು ಗೂಂಡಾಗಿರಿಯ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲುವ ಸಮಯ ಇದು ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಆಯ್ಕೆಯಾದ ಕಂಗನಾ ಅವರು ಚಂಡೀಗಡದಿಂದ ದೆಹಲಿಗೆ ಎನ್.ಡಿ.ಎ ಸಭೆಗೆ ತೆರಳುತ್ತಿದ್ದರು. ಈ ವೇಳೆ ಅವರ ಮೇಲೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದರಿಂದ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ರೈತ ಹೋರಾಟದ ಬಗ್ಗೆ ಕಂಗನಾ ಅವರು ಅವಹೇಳನಕಾರಿಯಾಗಿ‌ ಮಾತನಾಡಿದ್ದರು ಎಂದು ಆರೋಪಿಸಿ ಆ ಮಹಿಳೆ ಹಲ್ಲೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT