ಬುಧವಾರ, ಜೂನ್ 16, 2021
27 °C

ಗಣಪತಿ ಸಚ್ಚಿದಾನಂದ ಆಶ್ರಮದ ಗಿಳಿ ನಟ ದರ್ಶನ್‌ ತೋಟಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಗಣಪತಿ ಸಚ್ಚಿದಾನಂದ ಆಶ್ರಮದ ‘ಶುಕವನ’ದಗಿಳಿಯೊಂದನ್ನು, ಚಿತ್ರನಟ ದರ್ಶನ್‌ ಕೊಡುಗೆಯಾಗಿ ಪಡೆದಿದ್ದಾರೆ.

ಸೋಮವಾರ ಆಶ್ರಮಕ್ಕೆ ಭೇಟಿ ನೀಡಿದ್ದ ದರ್ಶನ್‌, ಸ್ವಾಮೀಜಿಯ ದರ್ಶನ ಪಡೆದು, ಕೆಲ ಹೊತ್ತು ಮಾತುಕತೆ ನಡೆಸಿದರು. ನಂತರ ಶುಕವನವನ್ನೂ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಅವರಿಗೆ ರೆಡ್‌ ಹೆಡೆಡ್‌ ಅಮೆಜಾನ್ ಗಿಳಿಯೊಂದು ಇಷ್ಟವಾಗಿದ್ದು, ಅದನ್ನು ತಮಗೆ ನೀಡುವಂತೆ ಸ್ವಾಮೀಜಿಯನ್ನು ಕೋರಿದ್ದಾರೆ. ದರ್ಶನ್‌ ಅಪೇಕ್ಷೆಗೆ ಸ್ಪಂದಿಸಿದ ಸ್ವಾಮೀಜಿ, ಗಿಳಿಯೊಂದನ್ನು ಕೊಡುಗೆಯಾಗಿ ನೀಡಿ ಆಶೀರ್ವದಿಸಿದರು ಎಂದು ಮಠದ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು