ಗುರುವಾರ , ಮೇ 26, 2022
22 °C

ನಟಿ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೊ ವೈರಲ್‌, ಅಭಿಮಾನಿಗಳಿಂದ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಗರ್ಭಿಣಿ ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇತ್ತೀಚೆಗೆ ಅವರ ಸೀಮಂತ ಶಾಸ್ತ್ರ ನೆರವೇರಿದೆ.

ಇದೀಗ ಅವರು ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿದ್ದಾರೆ. ವಿಡಿಯೊ ಹಾಗೂ ಫೋಟೊಗಳನ್ನು ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ‌ಹಂಚಿಕೊಂಡಿದ್ದು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಓದಿ... ವಿವಾಹ ವಾರ್ಷಿಕೋತ್ಸವ: ಎನ್‌ಟಿಆರ್‌–ಪ್ರಶಾಂತ್‌ ನೀಲ್‌ ದಂಪತಿಗಳ ಸಂಭ್ರಮಾಚಣೆ

‘ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಸಂಜನಾ, ಕನ್ನಡ ಸೇರಿದಂತೆ ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿ ಪಯಣ ಆರಂಭದಿಂದಲೂ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ, ಯಾವ ವಿಷಯವನ್ನೂ ಹಂಚಿಕೊಂಡಿರಲಿಲ್ಲ. 

ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಸಂಜನಾ ಗಲ್ರಾನಿ ಅಲಿಯಾಸ್ ಅರ್ಚನಾ, ವೈದ್ಯರಾದ ಅಜೀಜ್ ಪಾಷಾ ಅವರೊಂದಿಗೆ ಮದುವೆಯಾಗುವ ಮೂಲಕ 2018ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ತಮ್ಮ ಹೆಸರನ್ನು ‘ಮಾಹಿರಾ’ ಎಂದು ಬದಲಾಯಿಸಿಕೊಂಡಿದ್ದಾರೆ.
ಓದಿ... ರೆಹಮಾನ್ ಪುತ್ರಿ ಮದುವೆ ಸಂಭ್ರಮ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖತೀಜಾ–ರಿಯಾಸ್ದೀನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು