ಭಾನುವಾರ, ಸೆಪ್ಟೆಂಬರ್ 15, 2019
23 °C

ಈ ವಾರ ತೆರೆಗೆ ಬರುವ ಸಿನಿಮಾಗಳು

Published:
Updated:
Prajavani

ಸೂಜಿದಾರ

ಅಭಿಜಿತ್ ಕೋಟೆಗಾರ್ ಹಾಗೂ ಸುಚ್ಚೀಂದ್ರನಾಥ್ ನಾಯಕ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶನ ಮೌನೇಶ್ ಬಡಿಗೇರ್ ಅವರದ್ದು. ಭಿನ್ನಷಡ್ಜ ಅವರು ಇದಕ್ಕೆ ಸಂಗೀತ ನೀಡಿದ್ದಾರೆ. ಅಶೋಕ್ ವಿ. ರಾಮನ್ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಯಶವಂತ ಶೆಟ್ಟಿ ಇದರ ನಾಯಕ, ಹರಿಪ್ರಿಯಾ ನಾಯಕಿ. ಅಚ್ಯುತ್‌ ಕುಮಾರ್, ಸುಚೇಂದ್ರ ಪ್ರಸಾದ್, ಚೈತ್ರ ಕೊಟ್ಟೂರು, ಶ್ರೇಯಾ, ಬಿರಾದಾರ್ ತಾರಾ ಬಳಗದಲ್ಲಿದ್ದಾರೆ.

 ತ್ರಯ

ಕುಶಾಲ್ ಮಹಾಜನ್ ಹಾಗೂ ರಾಜ್ ಆನಂದ್ ನಿರ್ಮಿಸಿರುವ ಈ ಸಿನಿಮಾ ನಿರ್ದೇಶನ ಕೃಷ್ಣ ಸಾಯ್ ಅವರದ್ದು. ಆರ್.ಕೆ. ಪ್ರತಾಪ್ ಛಾಯಾಗ್ರಹಣ ಚಿತ್ರಕ್ಕಿದೆ. ಯತೀಶ್ ಮಹದೇವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರಾಬಳಗದಲ್ಲಿ ಸಂಯುಕ್ತ, ಶಂಕರ್ ಶ್ರೀಹರಿ, ರಜನಿ ಭಾರದ್ವಾಜ್, ಮದನ್ ಗೌಡ, ನೀತು ಬಾಲ, ನಿಮಿಷ, ಅಮೋಘ ರಾಹುಲ್ ಇದ್ದಾರೆ.

ಅನುಷ್ಕ

ಎಸ್.ಕೆ. ಗಂಗಾಧರ್ ಅವರು ನಿರ್ಮಿಸಿರುವ ಈ ಸಿನಿಮಾಕ್ಕೆ ಆ್ಯಕ್ಷನ್–ಕಟ್ ಹೇಳಿರುವವರು ದೇವರಾಜ್‍ ಕುಮಾರ್. ಬೆಂಗಳೂರು, ಮೈಸೂರು, ಅರಸೀಕೆರೆ ಹಾಗೂ ಬ್ಯಾಂಕಾಕ್‍ನಲ್ಲಿ ಇದರ ಚಿತ್ರೀಕರಣ ನಡೆದಿದೆ. 
ವೀನಸ್ ಮೂರ್ತಿ ಛಾಯಾಗ್ರಹಣ, ವಿಕ್ರಂ ಸೆಲ್ವ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಸಾಧು ಕೋಕಿಲ, ರೂಪೇಶ್ ಶೆಟ್ಟಿ, ಅಮೃತಾ, ರೂಪಾ ಶರ್ಮ, ಬಾಲರಾಜ್, ಆದಿಲೋಕೇಶ್ ಇದ್ದಾರೆ.

ಖನನ

ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಚಿತ್ರ ಇದು ಎಂದು ಸಿನಿತಂಡ ಹೇಳಿಕೊಂಡಿದೆ. ಶ್ರೀನಿವಾಸ ರಾವ್ ಇದರ ನಿರ್ಮಾಪಕ. ರಾಧಾ ಅವರ ಮೊದಲ ನಿರ್ದೇಶನದ ಸಿನಿಮಾ ಇದು. ನಾಯಕ ನಟ ಆರ್ಯವರ್ಧನ್ ಅವರು ಇದರಲ್ಲಿ ಐದು ವಿಭಿನ್ನ ಶೇಡ್‌ಗಳಲ್ಲಿ ನಟಿಸಿದ್ದಾರೆ. ರಮೇಶ್ ತಿರುಪತಿ ಛಾಯಾಗ್ರಹಣ, ಕುನ್ನಿ ಗುಡಿಪಾಟಿ ಸಂಗೀತ ಚಿತ್ರಕ್ಕಿದೆ. ನಾಯಕಿಯಾಗಿ ಕರಿಷ್ಮಾ ಬರೂಹ ನಟಿಸಿದ್ದಾರೆ. ಯುವ ಕಿಶೋರ್, ಅವಿನಾಶ್, ಓಂ ಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್, ಶ್ರೀನಿವಾಸ ರಾವ್, ವಿನಯಾ ಪ್ರಕಾಶ್, ಮೋಹನ್ ಜುನೇಜ, ಮಹೇಶ್ ಸಿದ್ದು, ಹೊನ್ನವಳ್ಳಿ ಕೃಷ್ಣ ತಾರಾಗಣದಲ್ಲಿದ್ದಾರೆ.

ಜಕಣಾಚಾರಿ ಅವನ 
ತಮ್ಮ ಶುಕ್ಲಾಚಾರಿ

ಇದು ಸಾಮಾಜಿಕ ಕಳಕಳಿಯ ಚಿತ್ರ ಎಂದು ಸಿನಿತಂಡ ಹೇಳಿದೆ. ರಾಜ ರವಿವರ್ಮ ಇದರ ನಿರ್ದೇಶಕ. ಮಾಸ್ಟರ್ ವಿನಯ್ ಸೂರ್ಯ, ಮಾಸ್ಟರ್ ಜಯ್ಯದ್, ಮಾಸ್ಟರ್ ಮಹೇಶ್, ಮಾಸ್ಟರ್ ಕಿರಣ್, ಮುನಿ, ಮೂಗು ಸುರೇಶ್, ನೀನಾಸಂ ಅಶ್ವಥ್, ಮನ್‌ದೀಪ್ ರಾಯ್, ಗಿರೀಶ್ ಶೆಟ್ಟಿ, ಶಿವು, ಪಂಕಜಾ ರವಿಶಂಕರ್, ಮಂಜು ಸೂರ್ಯ ತಾರಾಗಣದಲ್ಲಿದ್ದಾರೆ. ಸಾಮ್ರಾಟ್ ಎಸ್. ಛಾಯಾಗ್ರಹಣ, ಸಿ.ಜೆ. ಅನಿಲ್ ಸಂಗೀತ ಚಿತ್ರಕ್ಕಿದೆ.

 

Post Comments (+)