ಚಂದನವನಕ್ಕೆ ಪ್ರೇಮ್ ಪುತ್ರಿಯ ‘ಅಮೃತ’ ಹೆಜ್ಜೆ
ಉಮೇಶ್ ಕೆ.ಕೃಪ ಆ್ಯಕ್ಷನ್ ಕಟ್ ಹೇಳಲಿರುವ, ನಟ ‘ಡಾಲಿ’ ಧನಂಜಯ ಅವರ ಡಾಲಿ ಪಿಕ್ಚರ್ಸ್‌ನ ಹೊಸ ಪ್ರಾಜೆಕ್ಟ್ ‘ಟಗರು ಪಲ್ಯ’ ಡಿಸೆಂಬರ್ ಮೊದಲ ವಾರದಲ್ಲಿ ಸೆಟ್ಟೇರಲಿದೆ. ಇತ್ತೀಚೆಗಷ್ಟೇ ಚಿತ್ರದ ನಾಯಕ ಯಾರೆಂದು ಘೋಷಿಸಿದ್ದ ಚಿತ್ರತಂಡ, ಇದೀಗ ನಾಯಕಿಯ ಪರಿಚಯ ಮಾಡಿದೆ.
‘ಟಗರು ಪಲ್ಯ’ ಸಿನಿಮಾದಲ್ಲಿ ‘ಇಕ್ಕಟ್’ ಖ್ಯಾತಿಯ ನಟ ನಾಗಭೂಷಣ್ ಅವರಿಗೆ ಜೋಡಿಯಾಗಿ ‘ನೆನಪಿರಲಿ’ ಖ್ಯಾತಿಯ ಲವ್‌ಲಿ ಸ್ಟಾರ್ ಪ್ರೇಮ್ ಮಗಳು ಅಮೃತ ಪ್ರೇಮ್ ಜೋಡಿಯಾಗಲಿದ್ದಾರೆ. ಇದು ಅಮೃತ ಅವರ ಚೊಚ್ಚಲ ಸಿನಿಮಾ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಅಮೃತ ಚಂದನವನದಲ್ಲಿ ತಮ್ಮ ಸಿನಿಪಯಣವನ್ನು ಆರಂಭಿಸಲಿದ್ದಾರೆ. ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು ಅಮೃತ ಲುಕ್ ಗಮನ ಸೆಳೆಯುತ್ತಿದೆ.
‘ಸಿನಿಮಾಗೆ ಫ್ರೆಶ್ ಫೇಸ್ ಹುಡುಕಾಟದಲ್ಲಿದ್ದೆವು. ಕಾರ್ಯಕ್ರಮವೊಂದರಲ್ಲಿ ಅಮೃತ ಅವರನ್ನು ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದೆ. ಕಥೆ ಕೇಳಿ ನಿರ್ಧಾರ ಹೇಳುತ್ತೇನೆ ಎಂದಿದ್ದರು. ಅವರಿಗೂ ಈ ಕಥೆ ಇಷ್ಟವಾಯಿತು. ಸಿನಿಮಾ ಮಾಡಲು ಒಪ್ಪಿಕೊಂಡರು. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ಅಮೃತ ನಿರ್ವಹಿಸಲಿದ್ದಾರೆ. ಈ ಪಾತ್ರಕ್ಕಾಗಿ ಕಳೆದ 20 ದಿನಗಳಿಂದ ಅವರಿಗೆ ವರ್ಕ್ ಶಾಪ್ ನೀಡಲಾಗುತ್ತಿದೆ’ ಎನ್ನುತ್ತಾರೆ ಉಮೇಶ್.
ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರೇಮ್, ‘ಒಬ್ಬ ನಟನಾಗಿ, ಮಗಳು ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಖುಷಿ ಇದೆ. ಆಕೆ ಓದಿನಲ್ಲೂ ಬುದ್ಧಿವಂತೆ. ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾಳೆ. ಚಿತ್ರದ ಕಥೆ ಕೇಳಿದ ಮೇಲೆ ಆಕೆಗೆ ಚಿತ್ರರಂಗಕ್ಕೆ ಇಳಿಯಬೇಡ ಎನ್ನಲಾಗಲಿಲ್ಲ’ ಎಂದರು.
ಪ್ರಸ್ತುತ ಬಯೋ ಮೆಡಿಕಲ್ ಎಂಜಿನಿಯರಿಂಗ್ ಓದುತ್ತಿರುವ ಅಮೃತ, ಓದು ಮುಂದುವರಿಸುವುದರ ಜೊತೆಗೆ ಚಿತ್ರರಂಗದಲ್ಲೂ ತೊಡಗಿಸಿಕೊಳ್ಳಲಿದ್ದಾರೆ. ರಂಗಾಯಣ ರಘು, ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ ಎಂದಿದೆ ಚಿತ್ರತಂಡ. ವಾಸುಕಿ ವೈಭವ್ ಸಂಗೀತ ನಿರ್ದೇಶನನ, ಎಸ್.ಕೆ.ರಾವ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಪೃಥ್ವಿ ಅಂಬಾರ್ ಹೊಸ ಚಿತ್ರ ‘ಮತ್ಸ್ಯಗಂಧ’
ನನ್ನ ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ, ನಿಮ್ಮ ಆಶೀರ್ವಾದ, ಪ್ರೀತಿ, ಪ್ರೋತ್ಸಾಹ, ಅಭಿಮಾನವಿರಲಿ.
ಸದಾ ನೆನಪಿರಲಿ
ಪ್ರೇಮ್Thanks to DAALI ಧನಂಜಯ್ and ಟಗರು ಪಲ್ಯ Team 🙏❤️@Dhananjayaka @dr_bhushana #AmruthaPrem @daali_pictures pic.twitter.com/6Ac2iUWTxR
— Prem Nenapirali (@StylishstarPrem) November 28, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.