ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ಹೆಚ್ಚಿಸಿದ 'ಜಂಟಲ್‌ಮನ್‌'

ಆರು ತಾಸುಗಳಲ್ಲಿ ಒಂದು ಲಕ್ಷ ಮಂದಿಯಿಂದ ಟ್ರೇಲರ್‌ ವೀಕ್ಷಣೆ
Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಪ್ರಜ್ವಲ್‌ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ಅಭಿನಯದ ‘ಜಂಟಲ್‌ಮನ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‌ ಸಿನಿ ರಸಿಕರ ಕುತೂಹಲ ಹೆಚ್ಚಿಸುವಂತಿದೆ. ಈ ಚಿತ್ರವು ಇದೇ ತಿಂಗಳ ಕೊನೆಯಲ್ಲಿ ತೆರೆಕಾಣಲಿದೆ.

ಟ್ರೇಲರ್‌ ಬಿಡುಗಡೆಯಾದ ಆರು ತಾಸುಗಳಲ್ಲಿಯೂಟೂಬ್‌ನಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೇಲರ್‌ ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ಸದ್ದು ಮಾಡುತ್ತಿದೆ.

‘ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌’ನಿಂದ ಬಳಲುವ ವ್ಯಕ್ತಿಯ ಬದುಕಿನ ಸುತ್ತ ಹೆಣೆದ ಕಥೆಯೇ ಈ ಚಿತ್ರದ ಹೂರಣ. ದಿನದ 24 ತಾಸುಗಳಲ್ಲಿ 18 ತಾಸು ನಿದ್ದೆ ಮಾಡುವ ವ್ಯಕ್ತಿ, ಉಳಿದ ಆರು ತಾಸುಗಳಲ್ಲಿ ಆತನ ಜೀವನದ ಹೋರಾಟ, ಸಾಹಸ, ಕನಸು ಹೇಗಿರುತ್ತವೆ ಎನ್ನುವುದು ಈ ಚಿತ್ರದಲ್ಲಿ ಅನಾವರಣಗೊಂಡಿದೆಯಂತೆ.

‘ನಿನಗೆ ಇರುವುದು ಎರಡೇ ಆಪ್ಷನ್‌ ‘ನಿದ್ದೆನಾ? ಯುದ್ಧನಾ?’ ಎಂದು ಪೊಲೀಸ್‌ ಅಧಿಕಾರಿ ಕೇಳಿದಾಗ, ‘ಉಳಿಸಲ್ಲ ಯಾರನ್ನೂ ಉಳಿಸಲ್ಲ’ ಎಂದು ಪ್ರಜ್ವಲ್‌ ನಿದ್ದೆಯಿಂದ ಎದ್ದು ವೈರಿಗಳೊಂದಿಗೆ ಸೆಣೆಸಾಡುವ ದೃಶ್ಯಗಳು ಆ್ಯಕ್ಷನ್‌ ಪ್ರಿಯರಿಗೆ ಮಜಬೂತಾದ ಮನರಂಜನೆ ನೀಡುತ್ತವೆ.

ಪ್ರೀತಿಗಾಗಿ ಉದ್ಯೋಗ ತೊರೆಯುವ ಪ್ರಿಯತಮ, ಅನ್ಯಾಯದ ವಿರುದ್ಧ ಹೋರಾಡುವ ನಾಯಕ, ಕುಟುಂಬ ಪ್ರೀತಿಗೆ ಒತ್ತುಕೊಡುವ ಫ್ಯಾಮಿಲಿಮನ್‌ ಹೀಗೆ ಮೂರು ಶೇಡ್‌ಗಳು ಪ್ರಜ್ವಲ್‌ ಪಾತ್ರದಲ್ಲಿದೆ.ಪ್ರಜ್ವಲ್‌ ಥೇಟ್‌ ಕುಂಭಕರ್ಣನಾಗಿ ಕಾಣಿಸಿಕೊಂಡರೂ,ಸಾಹಸ, ಪ್ರೀತಿ, ಭಾವುಕತೆಯ ಅಂಶಗಳು ಚಿತ್ರದಲ್ಲಿ ಭರಪೂರವಾಗಿವೆ. ಇದಕ್ಕೆ ಪುಷ್ಟಿ ನೀಡುವಂತಿದೆಟ್ರೇಲರ್‌ ಕೂಡ. ಜಡೇಶ್‌ ಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ನಿಶ್ವಿಕಾ ನಾಯ್ಡು

ಮಾನವ ಕಳ್ಳಸಾಗಣೆ, ಡ್ರಗ್‌ ಜಾಲ ಭೇದಿಸುವಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಸಂಚಾರಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್‌ ಮತ್ತು ನಿಶ್ವಿಕಾ ಕಾಂಬಿನೇಷನ್‌ ಹಾಗೂ ಚಿತ್ರದ ಕೇಂದ್ರ ಬಿಂದುವಿನಂತಿರುವ ಬೇಬಿ ಆರಾಧ್ಯ ನಟನೆ ಹೇಗಿರಲಿದೆ ಎನ್ನುವುದು ಸಿನಿರಸಿಕರ ಕುತೂಹಲ ಹೆಚ್ಚಿಸಿದೆ.‌

ನಟ ಧ್ರುವ ಸರ್ಜಾ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರ ತಂಡವನ್ನು ಹರಸಿದ್ದಾರೆ.ನಟ ಪುನೀತ್‌ ರಾಜ್‌ಕುಮಾರ್‌ ಕೂಡ ಟ್ರೇಲರ್‌ ನೋಡಿ ಮೆಚ್ಚುಗೆ ವ್ಯಕ್ತಪ‍ಡಿಸಿ, ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು.

ಪ್ರಜ್ವಲ್‌ ದೇವರಾಜ್‌ ‘ನನಗೆ ಪುನೀತ್‌ ರಾಜ್‌ಕುಮಾರ್‌ ಸ್ಫೂರ್ತಿ. ಅವರ ಆ್ಯಕ್ಷನ್‌ ಚಿತ್ರಗಳನ್ನು ನೋಡಿಯೇ ನಾನು ಪ್ರೇರಣೆಗೊಂಡು ಆ್ಯಕ್ಷನ್‌ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದೆ’ ಎಂದರು.

ಈ ಚಿತ್ರಕ್ಕೆ ಗುರುದೇಶಪಾಂಡೆ ಬಂಡವಾಳ ಹೂಡಿದ್ದಾರೆ. ಅಜನೀಶ್‌ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಧನಂಜಯ್ ಜಡಗ ಅವರು ಸಾಹಿತ್ಯ ರಚಿಸಿದ್ದಾರೆ. ಆರೂರು ಸುಧಾಕರ ಶೆಟ್ಟಿ ಅವರ ಛಾಯಾಗ್ರಹಣವಿದೆ. ಆರತಿ ಕುಲಕರ್ಣಿ, ನೀಲೂ, ಅರವಿಂದ್ ತಾರಾಗಣದಲ್ಲಿದ್ದಾರೆ.

ಜಡೇಶ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT