ಶನಿವಾರ, ನವೆಂಬರ್ 16, 2019
21 °C

ಅಧಿಕಾರನೂ ನಂದೇ; ಆಜ್ಞೆಯೂ ನಂದೇ ಎಂದ ದರ್ಶನ್!

Published:
Updated:

ಎಂ.ಡಿ. ಶ್ರೀಧರ್‌ ಮತ್ತು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಕಾಂಬಿನೇಷನ್‌ನಡಿ ತೆರೆಗೆ ಸಿದ್ಧವಾಗಿರುವ ‘ಒಡೆಯ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿನ ‘ದಚ್ಚು’ ಡೈಲಾಗ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆಪಟ್ಟು ನನ್ನನ್ನು ಇಲ್ಲಿಗೆ ಕರೆಯಿಸಿಕೊಂಡಿದೆ. ಇನ್ನು ಮುಂದೆ ಅಧಿಕಾರನೂ ನನ್ನದೇ; ಆಜ್ಞೆಯೂ ನನ್ನದೇ. ನನ್ನನ್ನು ಪೇಸ್‌ ಮಾಡಬೇಕು ಅಂದ್ರೆ ಗುಂಡಿಗೆಯಲ್ಲಿ ಧಮ್ಮು ಇರಬೇಕು’ ಎಂದು ದರ್ಶನ್‌ ಅವರ ಡೈಲಾಗ್‌ ವೈರಲ್‌ ಆಗಿದೆ.

ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್‌. ಇದರಲ್ಲಿ ಐವರು ಸಹೋದರರ ಪ್ರೀತಿಯ ಅಣ್ಣನ ಕಥೆ ಹೊಸೆಯಾಗಲಿದೆ. ಈಗಾಗಲೇ, ದರ್ಶನ್‌ ನಟನೆಯ ‘ಯಜಮಾನ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಗೆದ್ದಿವೆ. ಹಾಗಾಗಿ, ಒಡೆಯನ ಮೇಲೂ ನಿರೀಕ್ಷೆ ಹೆಚ್ಚಿದೆ. ಬೆಂಗಳೂರು, ಹೈದರಾಬಾದ್, ಮೈಸೂರು, ಚಿತ್ರದುರ್ಗ, ಸ್ವಿಡ್ಜರ್ಲೆಂಡ್‌ನಲ್ಲಿ ಶೂಟಿಂಗ್‌ ನಡೆಸಲಾಗಿದೆ. ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರ ಈ ಸಿನಿಮಾ ಬಿಡುಗಡೆಯಾಗಲಿದೆ.

ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಎನ್‌. ಸಂದೇಶ್‌ ಬಂಡವಾಳ ಹೂಡಿದ್ದಾರೆ. ಎ.ವಿ. ಕೃಷ್ಣಕುಮಾರ್‌ (ಕೆ.ಕೆ.) ಅವರ ಛಾಯಾಗ್ರಹಣವಿದೆ. 

ಪ್ರತಿಕ್ರಿಯಿಸಿ (+)