ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜ ಜೀವನದ ಹೀರೊ ನೋಡಲು ತಪ್ಪದೇ ‘ಗಂಧದಗುಡಿ’ ವೀಕ್ಷಿಸಿ: ವಿಜಯ್‌ ಕಿರಗಂದೂರು

Last Updated 27 ಅಕ್ಟೋಬರ್ 2022, 15:47 IST
ಅಕ್ಷರ ಗಾತ್ರ

ಬೆಂಗಳೂರು: ನಟ, ದಿವಂಗತ ಪುನೀತ್ ರಾಜ್‌ಕುಮಾರ್‌ ಅಭಿನಯದ ಸಾಕ್ಷ್ಯಚಿತ್ರ‘ಗಂಧದಗುಡಿ’ಯನ್ನು ಕಣ್ತುಂಬಿಕೊಳ್ಳಲು ಅಭಿನಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದೀಗ ‘ಗಂಧದಗುಡಿ’ ಕುರಿತು ಟ್ವೀಟ್‌ ಮಾಡಿರುವ ‘ಕೆಜಿಎಫ್‌’ ಖ್ಯಾತಿಯ ವಿಜಯ್‌ ಕಿರಗಂದೂರು, ‘ನಿಜ ಜೀವನದ ಹೀರೊ ನೋಡಲು ಎಲ್ಲರೂ ತಪ್ಪದೇ ‘ಗಂಧದಗುಡಿ’ ವೀಕ್ಷಿಸಿ, ಮಕ್ಕಳನ್ನೂ ಕರೆದುಕೊಂಡು ಬನ್ನಿ’ ಎಂದು ಬರೆದುಕೊಂಡಿದ್ದಾರೆ.

‘ಕನ್ನಡಿಗರ ಕಣ್ಮಣಿ ‘ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌’ ಅವರನ್ನು ಈವರೆಗೆ ನೀವೆಲ್ಲಾ ಚಲನಚಿತ್ರಗಳಲ್ಲಿ ಹೀರೊ ಆಗಿ ನೋಡಿ ಸಂಭ್ರಮಿಸಿದ್ದೀರಿ. ಆದರೆ, ‘ಅಪ್ಪು’ ಅಭಿನಯದ ಕೊನೆಯ ಚಿತ್ರ ‘ಗಂಧದಗುಡಿ’ ನೋಡಿದಾಗ ನಿಜ ಜೀವನದ ಹೀರೊ ಹೇಗೆ ಇರುತ್ತಾರೆ ಎಂದು ಗೊತ್ತಾಗುತ್ತದೆ. ಎಲ್ಲ ಚಿತ್ರಗಳಿಗಿಂತಲ್ಲ ಗಂಧದಗುಡಿವಿಭಿನ್ನ ಮತ್ತು ವಿಶೇಷ’ ಎಂದಿದ್ದಾರೆ.

‘ನಿಜ ಜೀವನದ ಹೀರೊ ನೋಡಲು ಎಲ್ಲರೂ ತಪ್ಪದೇ ‘ಗಂಧದಗುಡಿ’ ವೀಕ್ಷಿಸಿ, ಮಕ್ಕಳನ್ನೂ ಕರೆದುಕೊಂಡು ಬನ್ನಿ. ಕರುನಾಡು ಸೊಬಗಿನ ಗಂಧದಗುರಿ ನವಪೀಳಿಗೆಗೆ ಸ್ಫೂರ್ತಿನೀಡುತ್ತದೆ’ ಎಂದು ವಿಜಯ್‌ ಬರೆದುಕೊಂಡಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ‘ಗಂಧದಗುಡಿ’ ಚಿತ್ರವನ್ನು ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ನಿರ್ದೇಶಿಸಿದ್ದಾರೆ.

2021ರ ಅಕ್ಟೋಬರ್ 29ರಂದು ಅಪ್ಪು ನಿಧನರಾದರು. ಈ ಕಾರಣಕ್ಕೆ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಅಕ್ಟೋಬರ್ 28ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಪ್ರೀಮಿಯರ್ ಶೋ: ಚಿತ್ರತಂಡ ಇಂದು ಸಂಜೆಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಸೆಲಬ್ರಿಟಿ ಪ್ರೀಮಿಯರ್ ಶೋ ಆಯೋಜಿಸಿತ್ತು.ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆ ಸದಸ್ಯರೆಲ್ಲ ಆಗಮಿಸಿದ್ದರು. ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್ ಪುತ್ರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT