ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಇರಿ, ಸಿನಿಮಾ ನೋಡಿ...

Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕವೇ ಲಾಕ್‌ಡೌನ್ ಆಗಿದೆ. ಮನೆಯಿಂದ ಹೊರಗೆ ಹೆಜ್ಜೆ ಇಡುವಂತಿಲ್ಲ. ಈ ಗೃಹಬಂಧನ ಒಂದೇ ದಿನಕ್ಕೆ ಸಾಕಾಗಿ ಹೋಗಿದೆ.

ಟಿ.ವಿ ನೋಡಿದ್ದಾಯಿತು, ಪೇಪರ್ ಓದಿದ್ದಾಯಿತು. ಮ್ಯಾಗಜಿನ್‌ ತಿರುವು ಹಾಕಿದ್ದಾಯಿತು. ಏನ್ಮಾಡಿದರೂಬೋರೊ ಬೋರು! ಹೀಗೆ ಬೋರ್ ಹೊಡೆಯುತ್ತಿದೆ ಎನ್ನುವವರಿಗೆ ಕ್ರಿಯಾಶೀಲ ಸಿನಿಮಾ ನಿರ್ದೇಶನ ಜಯತೀರ್ಥ ಒಂದು ಸಲಹೆ ನೀಡಿದ್ದಾರೆ. ‘ಈ ಬಿಡುವಿನ ವೇಳೆಯಲ್ಲಿನನ್ನ ನಿರ್ದೇಶನದ ಚಿತ್ರಗಳನ್ನು ಉಚಿತವಾಗಿ ನೋಡಬಹುದು. ಆಸಕ್ತರು, ಇನ್ನೂ ನೋಡಿಲ್ಲದವರು ಈಗ ನೋಡಬಹುದು. ಬೇರೆಯವರಿಗೆ ಶೇರ್‌ ಮಾಡಿ’ ಎಂದು ಜಯತೀರ್ಥ ತಿಳಿಸಿದ್ದಾರೆ. ಚಿತ್ರದ ಲಿಂಕ್‌ ಮತ್ತು ಸಂಕ್ಷಿಪ್ತ ವಿವರ ಇಲ್ಲಿದೆ.

ಒಲವೇ ಮಂದಾರ
‘ಒಲವೇ ಮಂದಾರ’ 2011ರಲ್ಲಿ ಬಿಡುಗಡೆಯಾದ ಪ್ರಯಾಣ ವಸ್ತುವುಳ್ಳ ಸಿನಿಮಾ. ಈ ಚಿತ್ರದಲ್ಲಿ ಹೊಸಬರಾದ ಶ್ರೀಕಾಂತ್ ಹಾಗೂ ಆಕಾಂಕ್ಷಾ ಮನ್ಸುಖಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿರಂಗಾಯಣ ರಘು, ವೀಣಾ ಸುಂದರ್, ನಾಸರ್ ಹಾಗೂಸಾಧು ಕೋಕಿಲನಟಿಸಿದ್ದಾರೆ.

link:https://www.youtube.com/watch?v=dkixoi5Gdxo

ಟೋನಿ
ಟೋನಿ, 2013ರಲ್ಲಿ ತೆರೆಕಂಡ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಶ್ರೀನಗರ ಕಿಟ್ಟಿ ಮತ್ತು ಐಂದ್ರಿತಾ ರೇ ಇದ್ದಾರೆ. ನಿರ್ಮಾಪಕರು ಇಂದ್ರ ಕುಮರ್ ಜಿ.ವಿ, ಸಂಗೀತ ನಿರ್ದೇಶನ ಸಾಧು ಕೋಕಿಲ ಸಂಗೀತ ಮತ್ತು ಜ್ಞಾನಮೂರ್ತಿ ಛಾಯಾಗ್ರಹಣ.

link: https://www.hotstar.com/in/movies/tony/1000061483/watch

ಬುಲೆಟ್ ಬಸ್ಯಾ
2015ರಲ್ಲಿ ತೆರೆಗೆ ಬಂದ ಚಿತ್ರ. ಇದೊಂದು ಎಂಟರ್‌ಟೈನ್‌ಮೆಂಟ್ ಸಿನಿಮಾ.ಚಿತ್ರದಲ್ಲಿ ಶರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಬಸ್ಯಾ ಮತ್ತು ಮುತ್ತುವಿನ ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

link: https://www.mxplayer.in/…/watch-bullet-basya-movie-online-0

ಬ್ಯೂಟಿಫುಲ್ ಮನಸುಗಳು
‌2017ರಲ್ಲಿ ತೆರೆಕಂಡ ಸಿನಿಮಾ. ಈ ಚಿತ್ರವನ್ನು ಎಸ್.ಪ್ರಸನ್ನ ಮತ್ತು ಎಸ್. ಶಶಿಕಲಾ ಬಾಲಾಜಿ ಸ್ಕಂದ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಬಿ.ಜೆ.ಭರತರವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಮತ್ತು ಸಂಗೀತ ನೀಡಿದ್ದಾರೆ

https://www.zee5.com/m…/details/beautiful-mansugalu/0-0-2684

ವೆನಿಲ್ಲಾ
#Vanilla https://www.youtube.com/watch?v=buMsiyebLn8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT