ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಿದ ‘ಎಣ್ಣೆ ಪಾರ್ಟಿ’

Published 22 ಜೂನ್ 2024, 5:27 IST
Last Updated 22 ಜೂನ್ 2024, 5:27 IST
ಅಕ್ಷರ ಗಾತ್ರ

ಈ ಹಿಂದೆ ‘ದ್ವಂದ್ವ’ ಎಂಬ ಚಿತ್ರ ನಿರ್ಮಿಸಿದ್ದ ತಂಡ ಒಟ್ಟಾಗಿ ‘ಎಣ್ಣೆ ಪಾರ್ಟಿ’ ಮಾಡಲು ಮುಂದಾಗಿದೆ. ಈ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ.

ಕಾಮನ್ ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಪ್ರದೀಪ್ ಕುಮಾರ್‌ ಕೆ  ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ದ್ವಂದ್ವ’ದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಧನಂಜಯ್‌ ನಾಗರಾಜು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

‘ಪ್ರೀತಿ ಎನ್ನುವುದು ಯೂನಿವರ್ಸಲ್‌. ಅದೇ ರೀತಿ ಎಣ್ಣೆ ಕೂಡ. ನಾಲ್ಕು ಯುವ ಜೋಡಿಗಳ ಸುತ್ತ ಕಥೆಯು ಸಾಗುತ್ತದೆ. ಶ್ರೀಮಂತರು, ಬಡವರು ಎಂಬ ಭೇದವಿಲ್ಲದೆ ಎಣ್ಣೆಯನ್ನು ಕುಡಿಯುತ್ತಾರೆ. ಆದರೆ ಒಳಗಡೆ ಹೋದಾಗ ಅವರು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಹಾಸ್ಯಮಯವಾಗಿ ತೋರಿಸುತ್ತೇವೆ’ ಎಂದರು ನಿರ್ದೇಶಕರು.

ಶೋಬನ್, ಸಂತೋಷ್, ಪ್ರೀತಿ, ಮಂಜುಳಾ, ವರುಣ್‌ ಇನ್ನಿತರರು ತಾರಾಬಳಗದಲ್ಲಿದ್ದಾರೆ. ನಾಲ್ಕು ಎಣ್ಣೆ ಹಾಡುಗಳಿಗೆ ಆಕಾಶ್ ಪರ್ವ ಸಂಗೀತ, ರಾಜ್‌ಕಾಂತ್.ಕೆ ಛಾಯಾಚಿತ್ರಗ್ರಹಣ ಇರಲಿದೆ. ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT