ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಪ್ಪೆರಾಗ ಕುಂಬಾರನ ಹಾಡು' ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ

Published 30 ಸೆಪ್ಟೆಂಬರ್ 2023, 5:02 IST
Last Updated 30 ಸೆಪ್ಟೆಂಬರ್ 2023, 5:02 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಕಂಡುಬರುವ ‘ಕುಂಬಾರ ಕಪ್ಪೆ’ ಎಂಬ ನಿಶಾಚಾರಿ ಕಪ್ಪೆ ಕುರಿತ ‘ಕಪ್ಪೆರಾಗ–ಕುಂಬಾರನ ಹಾಡು’ ಎಂಬ ಕನ್ನಡ ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಠಿತ 'ಜ್ಯಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿ ಲಭಿಸಿದೆ.

ಜ್ಯಾಕ್ಸನ್ ವೈಲ್ಡ್ ಮೀಡಿಯಾದ ಅತ್ಯುತ್ತಮ ಪ್ರಾಣಿ ವರ್ತನೆ ವಿಭಾಗದ ಈ ಪ್ರಶಸ್ತಿಯನ್ನು ಕಿರುಚಿತ್ರ ಪಡೆದಿದೆ.

‘ಈ ಚಿತ್ರವನ್ನು ಜಗತ್ತಿನಲ್ಲಿರುವ 8 ಕೋಟಿ ಕನ್ನಡ ಮಾತನಾಡುವ ಜನರಿಗೆ ಹಾಗೂ ಭಾರತದ 150 ಕೋಟಿ ಜನರಿಗೆ ಅರ್ಪಣೆ’ ಎಂದು ನಿರ್ದೇಶಕ ಪ್ರಶಾಂತ್ ಎಸ್. ನಾಯಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ.

‘ಸಂಗೀತ, ಸಾಹಿತ್ಯ ಸೇರಿದಂತೆ ಅನಾದಿಕಾಲದಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕನ್ನಡ ನಾಡು ಸಾವಿರಾರು ವರ್ಷಗಳಿಂದ ನಿಸರ್ಗದತ್ತವಾಗಿಯೂ ಸಂಪದ್ಭರಿತವಾಗಿದೆ. ಇಂಥ ನಾಡಿನ ಕನ್ನಡ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಜ್ಯಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿ ಲಭಿಸಿದೆ’ ಎಂದಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ತಮ್ಮ ಎಕ್ಸ್ ವೇದಿಕೆಯಲ್ಲಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT