ಕಳೆದ ನಾಲ್ಕು ಶುಕ್ರವಾರಗಳಲ್ಲಿ ರಾಜ್ಯದ ಚಿತ್ರಮಂದಿರಗಳಲ್ಲಿ 28 ಕನ್ನಡ ಸಿನಿಮಾಗಳು ತೆರೆಕಂಡಿವೆ. ಇಂದು (ಸೆ.19) ಆರು ಸಿನಿಮಾಗಳು ಈ ಪಟ್ಟಿಗೆ ಸೇರ್ಪಡೆಯಾಗಲಿವೆ.

ಕಮಲ್ ಶ್ರೀದೇವಿ: ವಿ.ಎ.ಸುನೀಲ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ. ಎನ್.ಚಲುವರಾಯಸ್ವಾಮಿ ಅರ್ಪಿಸಿ, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ಈ ಸಿನಿಮಾ ನಿರ್ಮಿಸಿದ್ದಾರೆ. ನಟ ರಾಜವರ್ಧನ್ ಅವರು ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀದೇವಿ ಎಂಬಾಕೆಯ ಕೊಲೆಯ ಸುತ್ತ ಈ ಚಿತ್ರದ ಕಥೆಯಿದೆ. ಕಮಲ್ ಪಾತ್ರದಲ್ಲಿ ಸಚಿನ್ ಹಾಗೂ ಶ್ರೀದೇವಿಯಾಗಿ ಸಂಗೀತಾ ಭಟ್ ನಟಿಸಿದ್ದಾರೆ.

ಅರಸಯ್ಯನ ಪ್ರೇಮಪ್ರಸಂಗ: ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಚಿತ್ರವಿದು. ‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಈ ಸಿನಿಮಾದಲ್ಲಿ ರಶ್ಮಿತಾ ಆರ್.ಗೌಡ ನಾಯಕಿಯಾಗಿ ನಟಿಸಿದ್ದಾರೆ. ಪಿ.ಡಿ.ಸತೀಶ್, ವಿಜಯ್ ಚೆಂಡೂರ್, ಸುಜಿತ್, ಸುಧಾ, ಚಿಲ್ಲರ್ ಮಂಜು, ಮಹದೇವ್ ಲಾಲಿಪಾಳ್ಯ ತಾರಾಬಳಗದಲ್ಲಿದ್ದಾರೆ. ಪ್ರವೀಣ್, ಪ್ರದೀಪ್ ಸಂಗೀತ ನಿರ್ದೇಶನ, ಗುರುಪ್ರಸಾದ್ ನಾರ್ನಾಡ್ ಛಾಯಾಚಿತ್ರಗ್ರಹಣ, ಸುನೀಲ್ ಕಶ್ಯಪ್ ಸಂಕಲನ ಚಿತ್ರಕ್ಕಿದೆ.

ಜೊತೆಯಾಗಿ ಹಿತವಾಗಿ: ಹೊಸಬರಿಂದಲೇ ಕೂಡಿರುವ ಈ ಸಿನಿಮಾವನ್ನು ಎ.ಆರ್.ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಪ್ರೇಮ ಕಥೆ ಹೊಂದಿರುವ ಈ ಚಿತ್ರದಲ್ಲಿ ಮನೆಯಲ್ಲಿ ಅತಿಯಾದ ಸ್ವತಂತ್ರವಿದ್ದರೆ ಅಥವಾ ತುಂಬ ಕಡಿವಾಣ ಹಾಕಿದರೆ ಮಕ್ಕಳು ಏನಾಗುತ್ತಾರೆ ಎಂಬುದನ್ನು ತೋರಿಸಲಾಗಿದೆ ಎಂದಿದೆ ಚಿತ್ರತಂಡ. ಅಗಸ್ತ್ಯ ಚಿತ್ರದ ನಾಯಕ. ಸುವಾರ್ತಾ ನಾಯಕಿ. ಆನಂದ್ ನೀನಾಸಂ, ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ ಮುಂತಾದವರು ಚಿತ್ರದಲ್ಲಿದ್ದಾರೆ.

ಖಾಲಿಡಬ್ಬ: ಈ ಸಿನಿಮಾವೂ ಹೊಸಬರ ಪ್ರಯತ್ನ. ಪ್ರಕಾಶ್ ಕೆ.ಅಂಬ್ಳೆ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ರಾಮ್ ಗುಡಿ ಅಭಿನಯಿಸಿದ್ದಾರೆ. ಪ್ರಕಾಶ್ ಅವರ ಚೊಚ್ಚಲ ಸಿನಿಮಾವಿದು. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಸಂಗೀತ ನೀಡಿ ನಟಿಸಿದ್ದಾರೆ. ‘ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಜೀವನ ಡಬ್ಬ ತುಂಬುತ್ತದೆ ಎಂಬ ಎಳೆ ಚಿತ್ರದ್ದು’ ಎಂದಿದೆ ಚಿತ್ರತಂಡ. ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಕುರಿ ಪ್ರತಾಪ್, ಮಜಾ ಭಾರತ ಸೀತಾರಾಮ್, ಸುಧಾ, ಹನುಮಕ್ಕ ತಾರಾಬಳಗದಲ್ಲಿದ್ದಾರೆ.

ಸೋಲ್ಮೇಟ್ಸ್: ಹಂಸಲೇಖ ಸಂಗೀತ ನೀಡಿರುವ ಈ ಸಿನಿಮಾವನ್ನು ಪಿ.ವಿ. ಶಂಕರ್ ನಿರ್ದೇಶಿಸಿದ್ದಾರೆ. ಜಿ.ಆರ್. ಅರ್ಚನಾ ಹಾಗೂ ಶಂಕರ್ ಪಿ.ವಿ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ‘ರಂಗ್ ಬಿರಂಗ್’ ಖ್ಯಾತಿಯ ಶ್ರೀಜಿತ್ ಸೂರ್ಯ, ಪ್ರಸನ್ನ ಶೆಟ್ಟಿ, ರಜನಿ, ಯಶ್ವಿಕಾ ನಿಷ್ಕಲ, ಅಲ್ಮಾಸ್, ಯಶ್ ಶೆಟ್ಟಿ, ಅರವಿಂದ್ ರಾವ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಪ್ರಶಾಂತ್ ನಟನ, ನವೀನ್ ಡಿ. ಪಡೀಲ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಒಂದು ಸಂದೇಶದೊಡನೆ ರೊಮ್ಯಾನ್ಸ್, ಆ್ಯಕ್ಷನ್, ಥ್ರಿಲ್ಲರ್ ಅಂಶಗಳನ್ನು ಸಿನಿಮಾ ಒಳಗೊಂಡಿದೆ.

ಧರ್ಮ ಕೀರ್ತಿರಾಜ್ ಹಾಗೂ ಅಪೂರ್ವ ನಟಿಸಿರುವ ‘ರೂಮ್ ನಂ–111’ ಸಿನಿಮಾ ಕೂಡಾ ಇಂದು ತೆರೆಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.