ಶನಿವಾರ, ಫೆಬ್ರವರಿ 4, 2023
17 °C

ಕಾಂತಾರ ನೋಡಿ ರಿಷಬ್‌ ಕಾಲಿಗೆ ಬಿದ್ದ ಯೂಟ್ಯೂಬ್‌ ವಿಮರ್ಶಕ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರದ ಪ್ರಚಾರದ ವೇಳೆ ಹಿಂದಿ ಯೂಟ್ಯೂಬ್‌ ಚಿತ್ರ ವಿಮರ್ಶಕರೊಬ್ಬರು ರಿಷಬ್‌ ಅವರ ಕಾಲಿಗೆ ಬಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕನ್ನಡ ಸಿನಿಮಾದ ಗತವೈಭವ ಎಂಬ ಟ್ಯಾಗ್‌ಲೈನ್‌ನಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ರಾಜ್ಯದಲ್ಲಿ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಇಂದಿನಿಂದ (ಅ.14) ಹಿಂದಿ ವಲಯದಲ್ಲೂ ತೆರೆ ಕಂಡಿದೆ. ಹೀಗಾಗಿ ಚಿತ್ರತಂಡ ಮುಂಬೈನಲ್ಲಿ ಚಿತ್ರ ಪ್ರಚಾರದಲ್ಲಿದೆ. ರಿಷಬ್‌ ಹಾಗೂ ಚಿತ್ರದ ನಾಯಕಿ ಸಪ್ತಮಿ ಗೌಡ ವಿವಿಧ ಯೂಟ್ಯೂಬ್‌ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಪ್ರಚಾರದ ವೇಳೆ ಹಿಂದಿ ಯೂಟ್ಯೂಬ್‌ ವಿಮರ್ಶಕ ಸೂರಜ್‌ ಕುಮಾರ್‌ ಎಂಬಾತ ರಿಷಬ್‌ ಅವರನ್ನು ತಬ್ಬಿಕೊಂಡು ಕಾಲಿಗೆ ನಮಸ್ಕರಿಸಿದ್ದಾನೆ.

‘ನೀವು ಎಂಥ ಅದ್ಭುತ ಸಿನಿಮಾ ಮಾಡಿದ್ದೀರಿ ಸರ್‌ . ನಾನು ತಮಾಷೆಗೆ ಮಾಡುತ್ತಿಲ್ಲ, ಈ ರೀತಿ ನಾನು ಯಾರ ಪಾದವನ್ನು ಮುಟ್ಟಿ ನಮಸ್ಕಾರ ಮಾಡಿಲ್ಲ. ಆದರೆ ಸಿನಿಮಾದಲ್ಲಿನ ನಿಮ್ಮ ನಟನೆಯನ್ನು ನೋಡಿ ನನಗೆ ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂಬುದಾಗಿ ಸೂರಜ್‌ ಹೇಳಿದ್ದಾನೆ.

ಇದನ್ನೂ ಓದಿ: ಕಾಂತಾರ: ಬಾಲಿವುಡ್‌ ಸಿನಿಮಾಗಳಿಗೆ ಸವಾಲೊಡ್ಡಲಿದೆಯಾ?

ಯೂಟ್ಯೂಬರ್ ಸೂರಜ್ ಕುಮಾರ್ ಸಿನಿಮಾ ವಿಮರ್ಶೆ, ಸೆಲೆಬ್ರಿಟಿಗಳ ಸಂದರ್ಶನದಿಂದ ಜನಪ್ರಿಯ. ಇದನ್ನು ನಿರೀಕ್ಷೆ ಮಾಡಿರದ ರಿಷಬ್‌, ನಮಸ್ಕರಿಸುತ್ತಿದ್ದಂತೆ ಒಂದು ಕ್ಷಣ ತಬ್ಬಿಬ್ಬಾದರು. ಹಾಗೇನಿಲ್ಲ ಎನ್ನತ್ತ ಸೂರಜ್‌ ಅವರನ್ನು ಸಮಾಧಾನಪಡಿಸುವ ಯತ್ನ ಮಾಡಿದ್ದಾರೆ.
‘ನನ್ನ ಸ್ನೇಹಿತೆಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಸರ್‌..’ ಎಂಬ ಆತನ ಹೇಳಿಕೆಗೆ ನಕಾರಾತ್ಮಕ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಸೂರಜ್‌ ಸೆಲೆಬ್ರೆಟಿ ಇಂಟರ್‌ವ್ಯೂ ವೇಳೆ ಅತಿಯಾಗಿ ವರ್ತಿಸುತ್ತಾನೆ ಎಂಬಂತಹ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು