ಗುರುವಾರ , ಫೆಬ್ರವರಿ 9, 2023
30 °C

‘ಕಾಂತಾರ’ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್‌ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಾಂತಾರ’ ಚಿತ್ರ ಸೆ. 30ರಂದು ಬಿಡುಗಡೆಯಾಗಿ ಸದ್ದು ಮಾಡಿದ್ದು ಗೊತ್ತೇ ಇದೆ. ಇದೀಗ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್‌ ಮಾರಾಟವಾದ ದಾಖಲೆ ಸೃಷ್ಟಿಸಿದೆ. 

ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲಿ ಈವರೆಗೆ ಚಿತ್ರ 257 ಕೋಟಿ ರೂಪಾಯಿಯಷ್ಟು ಗಳಿಕೆ ಮಾಡಿದೆ. ಇದೀಗ ಕರ್ನಾಟಕವೊಂದರಲ್ಲೇ 1 ಕೋಟಿ ಟಿಕೆಟ್‌ ಮಾರಾಟವಾಗಿದ್ದು ಇನ್ನೊಂದು ದಾಖಲೆ. ಹಾಗೆಂದು ಚಿತ್ರದ ಒಟ್ಟಾರೆ ಗಳಿಕೆಯ ನಿಖರ ಲೆಕ್ಕವನ್ನು ಹೊಂಬಾಳೆ ಫಿಲ್ಮ್ಸ್ ಬಿಟ್ಟುಕೊಟ್ಟಿಲ್ಲ. 

‘ಕಾಂತಾರ’ ಚಿತ್ರವನ್ನು ರಿಷಭ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಸಪ್ತಮಿ ಗೌಡ ಈ ಚಿತ್ರದ ನಾಯಕಿ. ಚಿತ್ರಮಂದಿರಗಳಲ್ಲಿ ದಾಖಲೆ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಒಟಿಟಿ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು