ನಾಲ್ಕನೇ ಎಪಿಸೋಡ್‌ನಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಭಾಗವಹಿಸಿದ್ದರು. ಕರಣ್ ಜೋಹರ್ ಅವರು ವಿಜಯ್ ದೇವರಕೊಂಡ ಅವರಿಗೆ ಕೇಳಿರುವ ಪ್ರಶ್ನೆ ಹಾಗೂ ಅದಕ್ಕೆ ಅನನ್ಯಾ ಪಾಂಡೆ ಕೊಟ್ಟ ಉತ್ತರ ವೈರಲ್ ಆಗಿತ್ತು. ‘ನೀವು ಕೊನೆ ಬಾರಿಗೆ ಯಾವಾಗ ಸೆಕ್ಸ್ ಮಾಡಿದ್ದೀರಿ’? ಎಂದು ಕರಣ್ ವಿಜಯ್‌ಗೆ ಕೇಳಿದರೆ ವಿಜಯ್ ನಾಚಿಕೊಂಡು ನಕ್ಕು ಸುಮ್ಮನಾಗಿದ್ದರು. ಆದರೆ, ಅನನ್ಯಾ ಪಾಂಡೆ, ‘ನನಗೆ ಗೊತ್ತು, ಇವತ್ತು ಮುಂಜಾನೆಯೇ ಅವರು ಸೆಕ್ಸ್ ಮಾಡಿರಬಹುದು’ ಎಂದು ಹೇಳಿದ್ದಕ್ಕೆ ಕರಣ್ ಅಚ್ಚರಿ ವ್ಯಕ್ತಪಡಿಸಿದ್ದರು.