ಗುರುವಾರ , ಜುಲೈ 29, 2021
26 °C
ಯಶಸ್ವಿ ನಿರ್ದೇಶಕನಿಗೆ ಟ್ರೋಲ್‌ ಕಾಟ

ಟ್ವಿಟ್ಟರ್‌: ಎಲ್ಲ ನಟರನ್ನೂ ಅನ್ ಫಾಲೊ ಮಾಡಿದ ಕರಣ್‌ ಜೋಹರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಣ್‌ ಜೋಹರ್‌

ನಟ ಸುಶಾಂತ್‌ ಆತ್ಮಹತ್ಯೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಬಾಲಿವುಡ್ ಯಶಸ್ವಿ ನಿರ್ದೇಶಕ ಕರಣ್‌ ಜೋಹರ್ ಟ್ವಿಟರ್‌ನಲ್ಲಿ ತಮ್ಮನ್ನು ಫಾಲೋ ಮಾಡುತ್ತಿದ್ದ ಎಲ್ಲ ನಟರನ್ನು ಅನ್‌ಫಾಲೋ ಮಾಡಿದ್ದಾರೆ. ಅಮಿತಾಭ್ ಬಚ್ಚನ್‌, ಶಾರೂಕ್‌ ಖಾನ್‌ ಮತ್ತು ಅಕ್ಷಯ್ ಕುಮಾರ್ ಅವರನ್ನು ಮಾತ್ರ ತಮ್ಮ ಫಾಲೊ ಮಾಡುತ್ತಿರುವವರ ಪ‍ಟ್ಟಿಯಲ್ಲಿ ಉಳಿಸಿಕೊಂಡಿದ್ದಾರೆ.

ಕರಣ್‌ ಅವರನ್ನು ಫಾಲೋ ಮಾಡುತ್ತಿದ್ದವರ ಪಟ್ಟಿಯಲ್ಲಿ ಬಾಲಿವುಡ್ ನಟ, ನಟಿಯರ ದೊಡ್ಡ ಹಿಂಡೇ ಇತ್ತು. ಅವರನ್ನೆಲ್ಲ ಅನ್‌ ಫಾಲೋ ಮಾಡಲು ಕಾರಣ ಏನು ಎಂದು ಕರಣ್‌ ಇದುವರೆಗೂ ಬಾಯ್ಬಿಟ್ಟಿಲ್ಲ. ಬಹುಶಃ ವಾಗ್ದಾಳಿಯಿಂದ ತಪ್ಪಿಸಿಕೊಳ್ಳಲು ಕರಣ್‌ ಹೀಗೆ ಮಾಡಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕುಹಕವಾಡಿದ್ದಾರೆ. 

ಬಾಲಿವುಡ್‌ನಲ್ಲಿಯ ಸ್ವಜನಪಕ್ಷಪಾತ, ಪರಿವಾರವಾದ ವಿರುದ್ಧ ಜನರು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯುತ್ತಿದ್ದಾರೆ. ಅವರ ಸಿಟ್ಟು ಕರಣ್‌ ಜೋಹರ್ ಅವರತ್ತ‌ ತಿರುಗುತ್ತಿದೆ.‌ ಇದರಿಂದ ಕರಣ್‌ ಎಲ್ಲರನ್ನೂ ಅನ್ ಫಾಲೊ ಮಾಡಿದ್ದಾರೆ. ಈಗ ಅವರನ್ನು ಫಾಲೊ ಮಾಡುತ್ತಿರುವವರಲ್ಲಿ ಕೇವಲ ಎಂಟು ಜನರಿದ್ದಾರೆ.  

ಅದರಲ್ಲಿ ನಾಲ್ವರು ಕರಣ್ ಜೋಹರ್‌ ಅವರ ಸ್ವಂತ ಬ್ಯಾನರ್ ಧರ್ಮಾ ಪ್ರೊಡಕ್ಷನ್ ಸಿಬ್ಬಂದಿ.‌ ಉಳಿದ ಮೂವರಲ್ಲಿ ಅಮಿತಾಭ್‌, ಅಕ್ಷಯ್‌ ಮತ್ತು ಶಾರುಕ್‌ ಇದ್ದಾರೆ. ಕರಣ್ ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಫಾಲೊ ಮಾಡುತ್ತಾರೆ. 

‘ಇಷ್ಟೆಲ್ಲ ಜನರ ಮಧ್ಯೆ ಬದುಕುತ್ತಿದ್ದರೂ ಕೆಲವೊಮ್ಮೆ ನಾವು ಏಕಾಂಗಿ ಎಂಬ ಭಾವನೆ ನಮ್ಮನ್ನು ಕಾಡಲು ಶುರುವಾಗುತ್ತದೆ. ಸುಶಾಂತ್ ಆತ್ಮಹತ್ಯೆ ಇಂಡಸ್ಟ್ರಿಗೆ ಎಚ್ಚರಿಕೆಯ ಕರೆಗಂಟೆ’ ಎಂದು ಕರಣ್ ಈಚೆಗೆ ಟ್ವೀಟ್‌ ಮಾಡಿದ್ದರು.

‘ಕಳೆದ ಕೆಲವು ವರ್ಷಗಳಿಂದ ನಾನು ಸುಶಾಂತ್‌ ಜತೆ ಸಂಪರ್ಕದಲ್ಲಿರಲಿಲ್ಲ. ಅದಕ್ಕಾಗಿ ಪಶ್ಚಾತಾಪ ಪಡುತ್ತಿದ್ದೇನೆ’ ಎಂದು  ಅವರು ಜನರ ಸಿಟ್ಟು ಶಮನ ಮಾಡುವ ಪ್ರಯತ್ನ ಮಾಡಿದ್ದರು. ಸುಶಾಂತ್‌ ಆತ್ಮಹತ್ಯೆ ನಂತರ ಕರಣ್‌ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು