ಭಾನುವಾರ, ಸೆಪ್ಟೆಂಬರ್ 22, 2019
22 °C

ನೆಗೆಟಿವ್ ಪಾತ್ರ ಕರೀನಾಗೆ ಇಷ್ಟ

Published:
Updated:

‘ವಿಭಿನ್ನ, ಎರಡು ಛಾಯೆಗಳಿರುವಂತಹ ಪಾತ್ರಗಳಲ್ಲಿ ನಟಿಸಬೇಕು. ಇಲ್ಲಿಯವರೆಗೂ ನಟಿಸಿದ್ದಕ್ಕಿಂತ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಬಯಕೆ ನನ್ನದು’. ನೆಗೆಟಿವ್‌ ಪಾತ್ರಗಳಲ್ಲಿ ನಟಿಸಲು ನನಗಿಷ್ಟ ಎಂದು ನಟಿ ಕರೀನಾ ಕಪೂರ್‌ ಹೇಳಿದ್ದಾರೆ. 

ತಮ್ಮ ಮುಂದಿನ ಚಿತ್ರ, ಅಕ್ಷಯ್‌ಕುಮಾರ್‌ ಜೊತೆ ನಟಿಸುತ್ತಿರುವ ‘ಗುಡ್‌ನ್ಯೂಸ್‌’ ಚಿತ್ರದ ಬಗ್ಗೆ ಮಾತನಾಡಿರುವ ಅವರು, ‘ಇದೊಂದು ಮನರಂಜನಾತ್ಮಕ ಚಿತ್ರ’ ಎಂದು ಹೇಳಿದ್ದಾರೆ. 

ಕರೀನಾ ಕಪೂರ್‌ ಬಾಲಿವುಡ್‌ಗೆ ಕಾಲಿಟ್ಟು 20 ವರ್ಷಗಳಾಗುತ್ತಾ ಬಂತು.  2004ರಲ್ಲಿ ಬಿಡುಗಡೆಯಾಗಿರುವ ‘ಫಿದಾ’ ಸಿನಿಮಾದಲ್ಲಿ ಈ ನಟಿ ನೆಗೆಟಿವ್‌ ಪಾತ್ರ ಮಾಡಿದ್ದರು. 2012ರಲ್ಲಿ ಬಿಡುಗಡೆಯಾದ ‘ಹೀರೊಯಿನ್‌’ ಚಿತ್ರದಲ್ಲೂ ಗ್ರೇ ಶೇಡ್‌ ಇರುವ ಪಾತ್ರವನ್ನು ಮಾಡಿದ್ದರು. ಆದರೆ ಉತ್ತಮ ನಿರ್ದೇಶನ ಹಾಗೂ ನಟನೆಗೆ ಅತ್ಯುತ್ತಮ ವಿಮರ್ಶೆ ಬಂದರೂ, ಈ ಚಿತ್ರ ಗೆಲುವು ಸಾಧಿಸಲಿಲ್ಲ. ಭಿನ್ನ ಭಿನ್ನ ಪಾತ್ರಗಳ ಪ್ರಯೋಗದಲ್ಲಿ ಕರೀನಾ ಕಾಣಿಸಿಕೊಂಡಿದ್ದರು. 

ಕರೀನಾ ಹಾಗೂ ಅಕ್ಷಯ್‌ ಅಭಿನಯದ ‘ಗುಡ್‌ನ್ಯೂಸ್‌’ ಡಿಸೆಂಬರ್‌ 27ರಂದು ಬಿಡುಗಡೆಯಾಗಲಿದೆ.

Post Comments (+)