ಮುಂಬೈ: ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಖಾನ್ ಮತ್ತು ಟಬು ಅಭಿನಯದ ‘ದಿ ಕ್ರ್ಯೂ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ಸಿನಿಮಾ ತಯಾರಕರು ಶನಿವಾರ ತಿಳಿಸಿದ್ದಾರೆ.
ಸಿನಿಮಾದಲ್ಲಿ ಕೃತಿ ಸನೋನ್ ಮತ್ತು ದಿಲ್ಜಿತ್ ದೋಸಾಂಜ್ ಸಹ ನಟಿಸಿದ್ದಾರೆ. ‘ದಿ ಕ್ರ್ಯೂ’ನಲ್ಲಿ ಮೂವರು ಮಹಿಳೆಯರು ವಿಮಾನಯಾನ ಕ್ಷೇತ್ರದಲ್ಲಿ ಜೀವನ ಕಂಡುಕೊಳ್ಳಲು ಪ್ರಯತ್ನಿಸುವ ಕಥಾಹಂದರವಿದೆ.
ಮುಂಬರುವ ಕಾಮಿಡಿ ಸಿನಿಮಾವನ್ನು ‘ಲೂಟ್ಕೇಸ್’ ಖ್ಯಾತಿಯ ರಾಜೇಶ್ ಕೃಷ್ಣನ್ ನಿರ್ದೇಶಿಸಿದ್ದಾರೆ ಮತ್ತು ರಿಯಾ ಕಪೂರ್ ಮತ್ತು ಏಕ್ತಾ ಆರ್ ಕಪೂರ್ ನಿರ್ಮಿಸಿದ್ದಾರೆ.
‘ದಿ ಕ್ರ್ಯೂ’ ಜನರಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುತ್ತದೆ ಎಂದು ಏಕ್ತಾ ಹೇಳಿದ್ದಾರೆ.
'ಸಿನಿಮಾದ ಮ್ಯಾಜಿಕ್ ಪ್ರತಿಯೊಬ್ಬ ಸದಸ್ಯರ ಸಹಕಾರ ಮತ್ತು ಪ್ರಯತ್ನದಲ್ಲಿದೆ ಎಂದು ನಾನು ನಂಬುತ್ತೇನೆ. ಮನರಂಜನೆಯನ್ನು ಮಾತ್ರವಲ್ಲದೆ ಸ್ಫೂರ್ತಿ ನೀಡುವ 'ದಿ ಕ್ರ್ಯೂ' ಕಥೆಯನ್ನು ತೆರೆ ಮೇಲೆ ತರಲು ನನ್ನ ತಂಡದೊಂದಿಗೆ ಉತ್ಸುಕಳಾಗಿದ್ದೇನೆ. ಅತ್ಯುತ್ತಮ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಈ ಚಿತ್ರವು ಸಹಯೋಗ ಮತ್ತು ಸೃಜನಶೀಲತೆಯ ಶಕ್ತಿಗೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸವಿದೆ’ ಎಂದು ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸಹೋದರಿ ಸೋನಮ್ ಕಪೂರ್ ಅವರಿಗಾಗಿ ‘ಆಯಿಷಾ’ ಮತ್ತು ‘ಖೂಬ್ಸೂರತ್’ ಸಿನಿಮಾಗಳನ್ನು ನಿರ್ಮಾಣ ಮಾಡಿದ ರಿಯಾ ಕಪೂರ್, ತನ್ನ ಕನಸಿನ ಪಾತ್ರದೊಂದಿಗೆ ಚಿತ್ರದ ಕೆಲಸವನ್ನು ಪ್ರಾರಂಭಿಸಲು ಉತ್ಸಾಹದಲ್ಲಿದ್ದೇನೆ ಎಂದು ಹೇಳಿದ್ದಾರೆ.
‘ನಾವು 'ದಿ ಕ್ರ್ಯೂ' ಚಿತ್ರೀಕರಣದ ಈ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಲು ಬಹಳ ಉತ್ಸಾಹದಿಂದಿದ್ದೇವೆ. ಏಕ್ತಾ ಅವರ ಜೊತೆ ಕೆಲಸ ಮಾಡುವುದು ನಿಜವಾದ ಸಂತೋಷವಾಗಿದೆ, ಏಕೆಂದರೆ ನಾವು ವಿಶಿಷ್ಟ ಮತ್ತು ಬಲವಾದ ಕಥೆಗಳನ್ನು ಪರದೆಯ ಮೇಲೆ ತರಲು ಒಂದೇ ತರಹದ ಉತ್ಸಾಹನ್ನು ಹೊಂದಿದ್ದೇವೆ.’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.