ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾವಾಗ್ತಿದೆ ‘ಕರಿಮಣಿ ಮಾಲಿಕ...’

Published 14 ಏಪ್ರಿಲ್ 2024, 18:54 IST
Last Updated 14 ಏಪ್ರಿಲ್ 2024, 18:54 IST
ಅಕ್ಷರ ಗಾತ್ರ

ಟ್ರೆಂಡ್‌ ಆದ, ಹಿಟ್‌ ಆದ ಹಾಡಿನ ಸಾಲುಗಳೇ ಚಿತ್ರದ ಶೀರ್ಷಿಕೆಯಾಗುವ ಟ್ರೆಂಡ್‌ ಬಹಳ ಕಾಲದಿಂದ ಇದೆ. ಆ ಸಾಲಿಗೆ ಇತ್ತೀಚೆಗೆ ಬಹಳ ಟ್ರೆಂಡ್‌ ಆಗಿದ್ದ ‘ಕರಿಮಣಿ ಮಾಲಿಕ ನೀನಲ್ಲ’ ಸೇರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯವಾಗಿದ್ದ ಈ ಸಾಲನ್ನೇ ಶೀರ್ಷಿಕೆಯಾಗಿ ಹೊಂದಿರುವ ಚಿತ್ರಕ್ಕೆ ಈ ಹಿಂದೆ ‘ಯೂಟರ್ನ್ 2’ ನಿರ್ದೇಶಿಸಿದ್ದ ಚಂದ್ರು ಓಬಯ್ಯ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. 

‘ಯೂ ಟರ್ನ್‌ 2‘ ಆದ ನಂತರ ‘ರಾಮು ಆ್ಯಂಡ್‌ ರಾಮು’ ಚಿತ್ರ ಮಾಡಿದ್ದೆ. ಅದು ಸೆನ್ಸಾರ್ ಹಂತದಲ್ಲಿದೆ. ಮತ್ತೊಂದು ಚಿತ್ರ ‘ಪ್ಯಾಟಿ ಹುಡ್ಗಿ ಹಳ್ಳಿ ಲೈಫು’ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಎಳನೀರು ಮಾರುವ ಹುಡುಗ, ಹೂ ಮಾರುವ ಹುಡುಗಿಯ ನಡುವಿನ ವಿಭಿನ್ನ ಪ್ರೇಮಕಥೆಯೇ ‘ಕರಿಮಣಿ ಮಾಲಿಕ ನೀನಲ್ಲ’. ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿ, 40 ದಿನಗಳ‌ ಕಾಲ‌ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಶೂಟಿಂಗ್ ನಡೆಸುವ ಯೋಜನೆಯಿದೆ’ ಎಂದರು ಚಂದ್ರು ಓಬಯ್ಯ.

ಚಿತ್ರದಲ್ಲಿ 4 ಹಾಡುಗಳಿದ್ದು, ಮ್ಯೂಸಿಕ್ ಕೂಡ ನಿರ್ದೇಶಕರದ್ದೆ. ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕೆ ಹುಡುಕಾಟ ನಡೆದಿದೆ. ವೀನಸ್ ನಾಗರಾಜಮೂರ್ತಿ ಛಾಯಾಚಿತ್ರಗ್ರಹಣವಿದೆ. ಉಳಿದ ಮಾಹಿತಿಯನ್ನು ಶೀಘ್ರದಲ್ಲಿ ನೀಡುವುದಾಗಿ ಚಿತ್ರತಂಡ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT