ಶನಿವಾರ, ಜೂನ್ 19, 2021
27 °C

ತಾಯ್ತನದ ಖುಷಿಗೆ ಕ್ಯಾಮೆರಾದಿಂದ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಕರಿಷ್ಮಾ ಕಪೂರ್ ಅವರು ಕ್ಯಾಮೆರಾ ಕಣ್ಣುಗಳಿಂದ ದೂರ ಇದ್ದಿದ್ದು ಪ್ರಜ್ಞಾಪೂರ್ವಕ ತೀರ್ಮಾನ ಆಗಿತ್ತು. ಕ್ಯಾಮೆರಾದಿಂದ ದೂರ ಇದ್ದು, ತಮ್ಮ ಮಕ್ಕಳ ಮೇಲೆ ಸಂಪೂರ್ಣ ಗಮನ ನೀಡುವುದು ಅವರ
ಉದ್ದೇಶವಾಗಿತ್ತು.

45 ವರ್ಷ ವಯಸ್ಸಿನ ಕರಿಷ್ಮಾ ಕೊನೆಯ ಬಾರಿ ಪೂರ್ಣ ಪ್ರಮಾಣದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು, 2012ರಲ್ಲಿ ಬಿಡುಗಡೆಯಾಗಿದ್ದ ‘ಡೇಂಜರಸ್ ಇಷ್ಕ್’ ಸಿನಿಮಾದಲ್ಲಿ. ‘ನನ್ನ ಮಕ್ಕಳಾದ ಸಮೀರಾ ಮತ್ತು ಕಿಯಾನ್ ಬೆಳೆದು ದೊಡ್ಡವರಾಗುವ ಹಂತಗಳನ್ನು ಮಿಸ್ ಮಾಡಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ’ ಎಂದು ಅವರು ತಾವು ಸಿನಿಮಾಗಳಿಂದ ದೂರ ಉಳಿದಿದ್ದಕ್ಕೆ ಕಾರಣ ಹೇಳಿದ್ದಾರೆ.

‘ತಾಯ್ತನ ನಿಭಾಯಿಸಲು ಬಹಳಷ್ಟು ಬದ್ಧತೆ ಬೇಕು’ ಎನ್ನುವ ಮಾತನ್ನೂ ಅವರು ಆಡಿದ್ದಾರೆ.

‘ನಾನು ಕ್ಯಾಮೆರಾದಿಂದ ಸಂಪೂರ್ಣವಾಗಿ ಯಾವತ್ತೂ ದೂರ ಇರಲಿಲ್ಲ. ಕಾಲಕಾಲಕ್ಕೆ ಕೆಲಸಗಳನ್ನು ಮಾಡುತ್ತಲೇ ಇದ್ದೆ. ಆದರೆ, ಪೂರ್ಣ ಪ್ರಮಾಣದಲ್ಲಿ ನಟನೆಯ ಹೊಣೆ ನಿಭಾಯಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಕೂಲಿ ನಂ.1’, ‘ರಾಜಾ ಹಿಂದುಸ್ತಾನಿ’, ‘ಹೀರೊ ನಂ.1’, ‘ದಿಲ್ ತೊ ಪಾಗಲ್ ಹೈ’, ‘ಜುಬೈದಾ’ ಇವುಗಳೆಲ್ಲ ಕರಿಷ್ಮಾ ಅಭಿನಯದ ಹಿಟ್ ಚಿತ್ರಗಳು. ಈಗ ಅವರು ‘ಮೆಂಟಲ್‌ಹುಡ್‌’ ವೆಬ್ ಸರಣಿ ಮೂಲಕ ತೆರೆಯ ಮೇಲೆ ಪುನಃ ಕಾಣಿಸಿಕೊಂಡಿದ್ದಾರೆ. ಇದು ಅವರು ನಟಿಸಿರುವ ಮೊದಲ ವೆಬ್ ಸರಣಿ.

‘ಈ ವೆಬ್ ಸರಣಿಯು ತಾಯ್ತನಕ್ಕೆ ಸಂಬಂಧಿಸಿದ್ದು. ನನ್ನ ಪಾಲಿಗೆ ಇದು ಬಹಳ ವಿಶೇಷವಾದದ್ದು. ಈ ಸರಣಿ ಬಗ್ಗೆ ಏಕ್ತಾ ಕಪೂರ್ ನನ್ನ ಬಳಿ ಹೇಳಿದಾಗ, ನಾನು ಮತ್ತೆ ಪೂರ್ಣ ಪ್ರಮಾಣದಲ್ಲಿ ನಟನೆ ಆರಂಭಿಸುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉತ್ತರಿಸಿದ್ದೆ. ಆದರೆ ಸ್ಕ್ರಿಪ್ಟ್‌ ಕೇಳಿದ ನಂತರ ಅದನ್ನು ಇಷ್ಟಪಟ್ಟೆ’ ಎಂದು ತಾವು ‘ಮೆಂಟಲ್‌ಹುಡ್‌’ನಲ್ಲಿ ನಟಿಸಿದ್ದರ ಹಿಂದಿನ ಕಥೆಯನ್ನು ವಿವರಿಸಿದ್ದಾರೆ.

‘ಮೆಂಟಲ್‌ಹುಡ್‌’ ಸರಣಿಯನ್ನು ಕರಿಷ್ಮಾ ಕೊಹ್ಲಿ ನಿರ್ದೇಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು