ಶನಿವಾರ, ಜೂನ್ 19, 2021
27 °C

ಅಮೀರ್ ಖಾನ್‌ ‘ಮುತ್ತು' ಕೊಟ್ಟ ದೃಶ್ಯ ನೆನೆದರೆ ಈಗಲೂ ಮೈ ನಡುಗುತ್ತೆ! –ಕರಿಷ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

90 ದಶಕದಲ್ಲಿ ಕರಿಷ್ಮಾ ಕಪೂರ್‌ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿದ್ದರು. ಅಮೀರ್‌ ಖಾನ್‌ ಮತ್ತು ಕರಿಷ್ಮಾ ಜೋಡಿಯಾ ರಾಜಾ ಹಿಂದೂಸ್ತಾನಿ ಸಿನಿಮಾ ಸೂಪರ್ ಹಿಟ್‌ ಆಗಿತ್ತು.

‌ಮಡಿವಂತಿಕೆಯ ಆ ಕಾಲಘಟ್ಟದಲ್ಲೇ ಅಮೀರ್‌ ಮತ್ತು ಕರಿಷ್ಮಾ ಅವರ ಲಿಪ್‌ಲಾಕ್‌ ದೃಶ್ಯ ಸಾಕಷ್ಟು ಸದ್ದು ಮಾಡಿತ್ತು. ಇಬ್ಬರ ನಡುವಿನ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಮಾಸ್‌ ಹಿಟ್‌ ಆಗಿದ್ದ ಈ ಸಿನಿಮಾದ ಹಾಡುಗಳು ಈಗಲೂ ಜನಪ್ರಿಯತೆಯನ್ನು ಪಡೆದುಕೊಂಡಿವೆ.

ಮದುವೆಯ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದ ಕರಿಷ್ಮಾ ,ಇದೀಗ ವೆಬ್‌ ಸೀರಿಸ್‌ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಕರಿಷ್ಮಾ ಮೆಂಟಲ್‌ವುಡ್‌ ವೆಬ್‌ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ವೆಬ್‌ ಸಿರೀಸ್‌ ಕುರಿತಂತೆ ಅವರು ಖಾಸಗಿ ಸುದ್ದಿ ವಾಹಿನಿಗಳ ಜೊತೆ ಮಾತನಾಡುವಾಗ ರಾಜಾ ಹಿಂದೂಸ್ತಾನಿ ಸಿನಿಮಾ ಹಾಗೂ ಅಮೀರ್ ಖಾನ್‌ ಬಗ್ಗೆ ಮಾತನಾಡಿದ್ದಾರೆ.

ರಾಜಾ ಹಿಂದೂಸ್ತಾನಿ ಸಿನಿಮಾದ ಮುತ್ತಿನ ದೃಶ್ಯದ ಬಗ್ಗೆ ಮಾತನಾಡಿದ ಅವರು ‘ಲಿಪ್‌ಲಾಕ್‌‘ ದೃಶ್ಯದ ಸಂದರ್ಭವನ್ನು ಮೂರು ದಿನಗಳ  ಕಾಲ ಚಿತ್ರಿಕರಣ ಮಾಡಲಾಗಿತ್ತು. ಇದು ನನಗೂ ಮತ್ತು ಅಮೀರ್‌ ಖಾನ್‌ ಅವರಿಗೂ ಸಾಕು ಸಾಕಾಗಿ ಹೋಗಿತ್ತು! ಊಟಿಯಲ್ಲಿ ಮೊದಲೇ ಚಳಿ, ಅದರ ನಡುವೆ ಫ್ಯಾನಿನ ಗಾಳಿ ಹಾಗೂ ಮಳೆ ನೀರಿನ ಸಿಂಚನದ ಸನ್ನಿವೇಶದಲ್ಲಿ ಕಿಸ್‌ ಮಾಡಬೇಕಿತ್ತು. ಅದು ಸರಿಯಾಗಿ ಬರುವವರೆಗೂ ಹಲವು ಸಲ ಕಿಸ್‌ ಮಾಡಿಸಲಾಗಿತ್ತು ಎಂದು ಕರಿಷ್ಮಾ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಶೂಟಿಂಗ್‌ ಬ್ರೇಕ್‌ನಲ್ಲಿ ನಾನು ಮತ್ತು ಅಮೀರ್‌ ಖಾನ್‌ ಈ ದೃಶ್ಯ ಯಾವಾಗ ಮುಗಿಯುತ್ತೋ ಎಂದು ಮಾತನಾಡಿಕೊಳ್ಳುತ್ತಿದ್ದೆವು ಎಂದು ಅವರು ಹೇಳಿದ್ದಾರೆ. ಈ ವೇಳೆ ನನ್ನ ಆರೋಗ್ಯ ಚೆನ್ನಾಗಿರಲಿಲ್ಲ. ಆ ದೃಶ್ಯವನ್ನು ನೆನೆಸಿಕೊಂಡರೇ ಈಗಲೂ ನನ್ನ ಮೈ ನಡುಗತ್ತೆ ಎಂದು ಕರಿಷ್ಮಾ ಹೇಳಿದ್ದಾರೆ. 

ಇದೇ ಸಿನಿಮಾದಲ್ಲಿ ಹಾಡೊಂದಕ್ಕೆ ಶಾರ್ಟ್ ಹಾಕಿಕೊಂಡು ಮುಜುಗರಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.

ಏಕ್ತಾ ಕಪೂರ್ ಅವರ ವೆಬ್‌ಸಿರೀಸ್‌ ಮೆಂಟಲ್‌ವುಡ್‌ ಇಂದಿನಿಂದ ಪ್ರಸಾರವಾಗಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು