ಸೋಮವಾರ, ಫೆಬ್ರವರಿ 17, 2020
27 °C

ಶಿಕಾರಾ ಸಿನಿಮಾ ನಿರ್ದೇಶಕರ ವಿರುದ್ಧ ಚಿತ್ರಮಂದಿರದಲ್ಲೇ ತಿರುಗಿಬಿದ್ದ ಮಹಿಳೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ವಿದು ವಿನೋದ್ ಚೋಪ್ರಾ ನಿರ್ದೇಶನದ 'ಶಿಕಾರಾ' ಚಿತ್ರವನ್ನು ವೀಕ್ಷಿಸಿದ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆಯೊಬ್ಬರು ಚಿತ್ರದಲ್ಲಿ ಕಥೆಯನ್ನು ತಿರುಚಲಾಗಿದೆ ಎಂದು ನಿರ್ದೇಶಕರ ವಿರುದ್ಧ ಚಿತ್ರಮಂದಿರದಲ್ಲಿಯೇ ವಾಗ್ದಾಳಿ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. 

ಸಿನಿಮಾ ನೋಡಿದ ಮಹಿಳೆ, 1990ರ ದಶಕದ ಕಾಶ್ಮೀರಿ ಪಂಡಿತರ ನಿಜವಾದ ಸಮಸ್ಯೆಗಳನ್ನು ಚೋಪ್ರಾ ವಾಣಿಜ್ಯೀಕರಣಗೊಳಿಸಿದ್ದಾರೆ ಮತ್ತು ಇಸ್ಲಾಮಿಕ್ ಗುಂಪುಗಳು ಮಾಡಿದ ಜನಾಂಗೀಯ ಹತ್ಯೆ ಮತ್ತು ಸಾಮೂಹಿಕ ಅತ್ಯಾಚಾರ ಸೇರಿದಂತೆ ಸಮುದಾಯದ ನಿಜವಾದ ಸಂಕಷ್ಟಗಳನ್ನು ಚಿತ್ರದಲ್ಲಿ ತೋರಿಸಿಲ್ಲ ಎಂದು ಆರೋಪಿಸಿದ್ದಾರೆ.

ಮಹಿಳೆಯು ಸಿನಿಮಾ ನಿರ್ದೇಶಕರ ವಿರುದ್ಧ ತಿರುಗಿಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

'ಸಮಸ್ಯೆಯನ್ನು ನೀವು ವಾಣಿಜ್ಯೀಕರಣಗೊಳಿಸಿರುವುದಕ್ಕೆ ನನ್ನ ಅಭಿನಂದನೆಗಳು. ನಾನು ಕಾಶ್ಮೀರಿ ಪಂಡಿತೆಯಾಗಿ ನಿಮ್ಮ ಚಲನಚಿತ್ರವನ್ನು ಬಹಿಷ್ಕರಿಸುತ್ತೇನೆ. ಚಿತ್ರದಲ್ಲಿ ನೀವು ಹೇಳಿರುವುದನ್ನು ನಾನು ನಿರಾಕರಿಸುತ್ತೇನೆ' ಎಂದು ಕಿಡಿಕಾರಿದ್ದಾರೆ.

ಸಮುದಾಯವು ಎದುರಿಸುತ್ತಿರುವ ನೋವುಗಳನ್ನು ಚೋಪ್ರಾ ಧ್ರುವೀಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೋಪ್ರಾ ಅವರು, ಮಹಿಳೆಯರಿಗಾಗಿಯೇ ಚಿತ್ರದ ಎರಡನೇ ಭಾಗಕ್ಕೆ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದ ನಿರ್ದೇಶಕರು, 'ಸತ್ಯಕ್ಕೆ ಎರಡು ಮುಖಗಳಿವೆ' ಮತ್ತು 'ಜನರು ಒಂದೇ ವಿಚಾರಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಈಗ ನಾನು ನಿಮಗಾಗಿಯೇ ಸಿನಿಮಾದ ಮುಂದುವರಿದ ಭಾಗವನ್ನು ಮಾಡುತ್ತೇನೆ ಎಂದು ಉತ್ತರಿಸಿದರು.

'ಶಿಕಾರ' ಸಿನಿಮಾ ಫೆಬ್ರುವರಿ 7ರಂದು ದೇಶದಾದ್ಯಂತ ಬಿಡುಗಡೆಯಾಗಿದೆ. ನವಿರಾದ ಪ್ರೇಮ ಕಥೆಯೊಂದಿಗೆ ಕಾಶ್ಮೀರ ಪಂಡಿತರ ಸಾಮೂಹಿಕ ವಲಸೆಯ ಕಥಾ ಹಂದರವಿರುವ ಚಿತ್ರ ಇದಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು