ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಕ್ಕಿ ಕೌಶಲ್–ಕತ್ರೀನಾ ಕೈಫ್

Last Updated 16 ಡಿಸೆಂಬರ್ 2021, 6:11 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಸಮಾರಂಭದಲ್ಲಿ ಮದುವೆಯಾದ ಬಾಲಿವುಡ್ ತಾರೆಗಳಾದ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮೊದಲ ಬಾರಿಗೆ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ರಾಜಸ್ಥಾನದಫೋರ್ಟ್ ಬರ್ವಾರ ಸಿಕ್ಸ್ ಸೆನ್ಸಸ್ ರೆಸಾರ್ಟ್‌ನಲ್ಲಿ ವಿಕ್ಕಿ–ಕತ್ರೀನಾ ಮದುವೆ ಡಿಸೆಂಬರ್ 9ರಂದು ನಡೆದಿತ್ತು.

ಬಳಿಕ ವಿಕ್ಕಿ–ಕತ್ರೀನಾ ಜೋಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಜತೆಯಾಗಿ, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಮದುವೆಯನ್ನು ಅತ್ಯಂತ ಖಾಸಗಿಯಾಗಿ ನಡೆಸಲಾಗಿದ್ದು, ಸ್ನೇಹಿತರು ಮತ್ತು ಕುಟುಂಬದ ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ವಿಕ್ಕಿ ಕೌಶಲ್ ಅವರ ಕುಟುಂಬದ ಮನೆಗೆ ತೆರಳುವ ಸಂದರ್ಭದಲ್ಲಿ ಈ ಜೋಡಿ ಜತೆಯಾಗಿ ಕಾಣಿಸಿಕೊಂಡಿದ್ದು, ಅವರ ಫೋಟೊಗಳು ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT