ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ನಿಂದ ತಯಾರಾಗುತ್ತಿರುವ ಮೊದಲ ಸಿನಿಮಾ’ಕವಲುದಾರಿ’ ಟೀಸರ್ ಭಿನ್ನ ರೀತಿ ಬಿಡುಗಡೆಗಳಿಂದಲೇ ಸುದ್ದಿಮಾಡುತ್ತಿದೆ.

ಈ ಸಿನಿಮಾದ ಮೊದಲ ಟೀಸರ್ ‘ಅಕ್ಕ ಸಮ್ಮೇಳನ’ದಲ್ಲಿ ಬಿಡುಗಡೆಗೊಂಡು ಹೊಸತನಕ್ಕೆ ನಾಂದಿ ಹಾಡಿತ್ತು. ಈಗ ಸಿನಿಮಾದ ಎರಡನೇ ಟೀಸರ್ ಬಿಡುಗಡೆಯಾಗುತ್ತಿದ್ದು, ಅದನ್ನು ಚಿತ್ರಮಂದಿರಗಳಲ್ಲಿ ತೋರಿಸುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.

ಟೀಸರ್ ನೋಡೊಕೆ ಚಿತ್ರಮಂದಿರಕ್ಕೆ ಹೋಗ್ಬೇಕಾ ಅಂತ ಯೋಚಿಸಬೇಡಿ... ನಟಸಾರ್ವಭೌಮ ಸಿನಿಮಾ ನೋಡಲು ಹೋದವರು ಕವಲುದಾರಿಯ ಟೀಸರ್ ವೀಕ್ಷಿಸಬಹುದು. ಹೌದು, ಪುನಿತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದೊಂದಿಗೆ ಶುಕ್ರವಾರದಿಂದ ಈ ಟೀಸರ್ (ಫೆ.8)ಸಹ ಪ್ರದರ್ಶನಗೊಳ್ಳಲಿದೆ.

ದಿಕ್ಕು ದೆಸೆ ಇಲ್ಲದೇ ಬೆಳೆಯುತ್ತಿರುವ ಊರಿದು. ಅರಮನೆ ಕೆಳಗೆ ಸಿಗೋ ಮೂಳೆ ಬಗ್ಗೆ ನೀವ್ಯಾಕೆ ಇಷ್ಟೊಂದು ಇಂಟರೆಸ್ಟ್ ತೋರಿಸ್ತಿದ್ದೀರಾ.... ಎಂಬ ಡೈಲಾಗ್‌ನಿಂದ ಆರಂಭಗೊಳ್ಳುವ ಮೊದಲ ಟೀಸರ್‌ನಲ್ಲಿ, ಮೂಳೆಗಳ ಹಿಂದಿನ ಕಥೆಯನ್ನು ಹುಡುಕಿ ಹೊರಡುವ ಟ್ರಾಫಿಕ್‌ಪೊಲೀಸ್ ಮತ್ತು ಆತನಲ್ಲಿ ಮೂಡಿರುವ ಕುತೂಹಲವನ್ನು ತಣಿಸಿಕೊಳ್ಳುವ ಪ್ರಯತ್ನದ ದೃಶ್ಯಾವಳಿಗಳನ್ನು ಕಾಣಬಹುದಿತ್ತು. ಪತ್ತೆದಾರಿ ಸಿನಿಮಾಗೆ ಇರಬಹುದಾದ ಬಹಳಷ್ಟು ಅಂಶಗಳನ್ನು ಆ ಟೀಸರ್‌ನಲ್ಲಿತ್ತು.

‘ಮೊದಲ ಟೀಸರ್‌ನಷ್ಟೇ ಎರಡನೇಯದ್ದಕ್ಕೂ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳ ವೀಕ್ಷಕರಿಗೆ ಸೀಮಿತವಾಗದೆ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಲ್ಲಿಯೂ ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸುವ ಹಂಬಲದಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ್ ರಾವ್.

‘ಮೊದಲ ಟೀಸರ್‌ನಲ್ಲಿ ಕವಲದಾರಿಯಲ್ಲಿ ಏನಿರುತ್ತದೆ ಎನ್ನುವ ಝಲಕ್ ನೀಡಿದ್ದೆವು. ಈಗ ಬಿಡುಗಡೆಗೊಳ್ಳುವ ಟೀಸರ್‌ನಲ್ಲಿ ಪಾತ್ರಗಳ ಪರಿಚಯ, ಅವು ಅಭಿವ್ಯಕ್ತಿಸುವ ಭಾವವನ್ನು ಜನರ ಮುಂದಿಡುತ್ತಿದ್ದೇವೆ. ಒಂದೊಂದು ಪಾತ್ರವೂ ಭಿನ್ನ ಧ್ವನಿಯನ್ನು ಹೊಮ್ಮಿಸುತ್ತವೆ. ಆ ಧ್ವನಿಗಳನ್ನು ಚಿತ್ರಮಂದಿರಗಳಲ್ಲಿ ಕೇಳುವುದಕ್ಕಾಗಿಯೇ ವಿನ್ಯಾಸ ಮಾಡಿದ್ದೇವೆ. ಅಲ್ಲಿಯೇ ಕೇಳಿದರೆ ಹೆಚ್ಚು ಖುಷಿ ಕೊಡುತ್ತದೆ’ ಎಂದರು.

ಒಂದು ವಾರದ ನಂತರ ಯೂಟೂಬ್‌ನಲ್ಲಿ ಟೀಸರ್ ಲಭ್ಯವಾಗಲಿದ್ದು, ಮಾರ್ಚ್‌ನಲ್ಲಿ ಸಿನಿಮಾ ಬಿಡಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ರೂಪಿಸಿದೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಿರ್ದೇಶಕ ಹೇಮಂತ್ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ’ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ರೋಶಿನಿ ಪ್ರಕಾಶ್ ಚಿತ್ರದ ನಾಯಕಿ.ಅನಂತನಾಗ್, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್, ಸಮನ್ವಿತಾ ಶೆಟ್ಟಿ, ಸಂಪತ್ ಕುಮಾರ್ ಪ್ರಮುಖ ತಾರಗಣದಲ್ಲಿದ್ದಾರೆ.

ಸಂಗೀತ ನಿರ್ದೇಶಕ ಚರಣ್ ರಾಜ್ , ಜಗದೀಶ್ ಎನ್ ಅವರ ಸಂಕಲನ, ಅದ್ವೈತ ಗುರುಮೂರ್ತಿ ಅವರ ಕ್ಯಾಮರ ಕೈ ಚಳಕಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.