ಬೆಂಗಳೂರು: ಕನ್ನಡದ ‘ನವಗ್ರಹ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟ ಧರ್ಮಕೀರ್ತಿರಾಜ್, ಇದೀಗ ಬಾಲಿವುಡ್‌ನತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ನವಗ್ರಹ ಚಿತ್ರದಲ್ಲಿನ ‘ಕಣ್ ಕಣ್ಣ ಸಲಿಗೆ’ ಹಾಡು ಧರ್ಮಕೀರ್ತಿರಾಜ್ ಅವರಿಗೆ ಹೆಸರು ತಂದುಕೊಟ್ಟಿತ್ತು. ನಂತರ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ಇದೀಗ ‘ಕಿತ್ನಾ ಮಜಾ ಹೈ’ ಎನ್ನುವ ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಮೋಸಹೋಗಿ ಆತ್ನಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡಿ, ಅವಳಲ್ಲಿ ಅನುರಕ್ತಳಾಗಿ ಒಂದಾಗುವ ಕತೆಯನ್ನು ಈ ಹಾಡು ಹೊಂದಿದೆ. ಈ ಹಾಡನ್ನು ರವಿಶರ್ಮ ನಿರ್ದೇಶನ ಮಾಡಿದ್ದು, ಪಪ್ಪುಮಲ ಅವರು ಕ್ರಿಯೇಟೀವ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಯುನೈಟೆಡ್ ಫಿಲಿಂಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಸೇರಿಕೊಂಡುಅಶೋಕ್‌ಜೈನ್ ಈ ಆಲ್ಬಂ ನಿರ್ಮಾಣ ಮಾಡಿದ್ದಾರೆ. ನಗ್ಮಅಕ್ತರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ತಾಫ್‌ಸಯ್ಯೀದ್ ಈ ಆಲ್ಬಂನ ಗಾಯಕರಾಗಿದ್ದು, ಶ್ರೀಕಾಂತ್ ಅಸತಿ ಛಾಯಾಗ್ರಹಣವಿದೆ. ಈ ಆಲ್ಬಂ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.