ಬುಧವಾರ, ಡಿಸೆಂಬರ್ 8, 2021
25 °C

’ದಸರಾ’ಗೆ ಬಂದ ಕೀರ್ತಿ ಸುರೇಶ್‌: ’ಮಹಾನಟಿ’ಯ ಸಂಭಾವನೆ ₹3 ಕೋಟಿಗೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾನಟಿ ನಂತರ ಕೀರ್ತಿ ಸುರೇಶ್ ಜನಪ್ರಿಯತೆ ಹೆಚ್ಚಾದರೂ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಸದ್ಯ ಈಗ ತೆಲುಗು, ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್‌ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. 

ತೆಲುಗಿನ ನ್ಯಾಚುರಲ್‌ ಸ್ಟಾರ್‌ ನಾಣಿ ಜೊತೆ ’ದಸರಾ’ ಸಿನಿಮಾದಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್‌ ಈ ಚಿತ್ರಕ್ಕಾಗಿ ₹3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದಲ್ಲಿ ₹ 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅವರ ಸಾಲಿಗೆ ಇದೀಗ ಕೀರ್ತಿ ಸುರೇಶ್‌ ಅವರ ಹೆಸರು ಕೂಡ ಸೆರ್ಪಡೆಯಾಗಿದೆ. 

ದಸರಾ ಸಿನಿಮಾ ನಾಣಿ ಕ್ಯಾರಿಯರ್‌ನಲ್ಲೇ ಬಿಗ್‌ ಬಜೆಟ್‌ ಸಿನಿಮಾ ಎಂದು ಹೇಳಲಾಗುತ್ತಿದೆ. ಸುಧಾಕರ್‌ ಚೆರುಕುರಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಶ್ರೀಕಾಂತ್‌ ಒಡೆಲಾ ನಿರ್ದೇಶನವಿದೆ. ಇಡೀ ಸಿನಿಮಾ ತೆಲಂಗಾಣ ಸೊಗಡಿನಿಂದ ಕೂಡಿರಲಿದೆ ಎಂದು ಚಿತ್ರತಂಡ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು