ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kerebete Kannada Movie: ‘ಕೆರೆಬೇಟೆ’ಯಲ್ಲಿ ಖಳ‘ನಾಯಕ’!

Published 25 ಫೆಬ್ರುವರಿ 2024, 10:41 IST
Last Updated 25 ಫೆಬ್ರುವರಿ 2024, 10:41 IST
ಅಕ್ಷರ ಗಾತ್ರ

ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ನಟಿಸಿದ್ದ ಗೌರಿಶಂಕರ್‌ ಹಾಗೂ ಬಿಂದು ಶಿವರಾಂ ಜೋಡಿಯಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಮಕ್ಕಳು ದೀಪಕ್ಕೆ ಎಣ್ಣೆ ಹಾಕುವ ಮೂಲಕ ಟ್ರೇಲರ್‌ ಬಿಡುಗಡೆಗೊಂಡಿದ್ದು ವಿಶಿಷ್ಟವಾಗಿತ್ತು.

ಅಂಟಿಗೆಪಿಂಟಿಗೆ ಆಚರಣೆ ಜೊತೆಗೆ ಮಲೆನಾಡಿನ ಹಲವು ವಿಶಿಷ್ಟ ಸಂಸ್ಕೃತಿಗಳು ಚಿತ್ರದಲ್ಲಿದೆ ಎಂಬುದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ತಿಳಿಯುತ್ತಿದೆ. ಚಿತ್ರದಲ್ಲಿ ನಾಯಕ ಗೌರಿಶಂಕರ್‌ ರೈತನ ರೈತನ ಮಗನಾಗಿದ್ದು, ಕೊನೆಗೆ ಆತನೇ ಖಳನಾಯಕನಾಗಿ ಬದಲಾಗುವ ವಿಚಿತ್ರ ಕಥೆಯ ಸುಳಿವನ್ನು ಟ್ರೇಲರ್‌ ನೀಡುತ್ತಿದೆ. 

ಟೀಸರ್‌, ಹಾಡುಗಳಿಂದ ಗಮನ ಸೆಳೆದಿರುವ ಈ ಚಿತ್ರಕ್ಕೆ ರಾಜ್‌ಗುರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಜನಮನ ಸಂಸ್ಥೆ ನಿರ್ಮಿಸಿದ್ದು, ದಿನಕರ್‌ ತೂಗುದೀಪ್‌ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಗಗನ್‌ ಬದೇರಿಯ ಸಂಗೀತವಿದ್ದು, ಕೀರ್ತನ್‌ ಪೂಜಾರಿ ಛಾಯಾಚಿತ್ರಗ್ರಹಣವಿದೆ. ಗೋಪಾಲ್‌ ದೇಶಪಾಂಡೆ, ಸಂಪತ್‌ ಕುಮಾರ್‌, ಹರಿಣಿ ಮೊದಲಾದವರು ತಾರಾಗಣದಲ್ಲಿದ್ದಾರೆ. 

ಸಿಗಂದೂರು, ಕೋಗಾರಿನ ಕಾಡು ಸೇರಿದಂತೆ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಮಾ.15 ರಂದು  ತೆರೆಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT