ಜಗತ್ತಿನಾದ್ಯಂತ ಬಾಕ್ಸ್ಆಫೀಸ್ನಲ್ಲಿ ₹1,400 ಕೋಟಿ ಬಾಚಿದ್ದ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಿ ಸೋಮವಾರಕ್ಕೆ (ಏ.14) ಮೂರು ವರ್ಷಗಳು ಉರುಳಿವೆ.

ಇದೇ ಸಂದರ್ಭದಲ್ಲಿ ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರುವ ಮುನ್ಸೂಚನೆಯನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಡನೇ ಭಾಗದ ತುಣುಕುಗಳಿರುವ ವಿಡಿಯೊವೊಂದನ್ನು ಅಪ್ಲೋಡ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಕೊನೆಯಲ್ಲಿ ರಾಕಿ ಭಾಯ್ ಬಾಯಿಯಿಂದಲೇ ಮೂರನೇ ಭಾಗದ ಅಪ್ಡೇಟ್ ನೀಡಿದೆ. ‘ಕೆಜಿಎಫ್ ಚಾಪ್ಟರ್–3: ಸಿ ಯು ಸೂನ್’ ಎಂಬ ಡೈಲಾಗ್ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದಾರೆ ಯಶ್. ಅಮೆರಿಕದವರು ಮತ್ತು ಇಂಡೊನೇಷ್ಯದವರು ಏಕೆ ರಾಕಿ ಹಿಂದೆ ಬಿದ್ದಿದ್ರು ಅನ್ನೋ ಕಥೆ ಮೂರನೇ ಚಾಪ್ಟರ್ನಲ್ಲಿ ಇರಲಿದೆ ಎನ್ನಲಾಗಿದೆ.

ಸದ್ಯಕ್ಕೆ ಪ್ರಶಾಂತ್ ನೀಲ್ ತೆಲುಗಿನ ಜೂನಿಯರ್ ಎನ್ಟಿಆರ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದೆ. ಇದಾದ ಬಳಿಕ ಪ್ರಭಾಸ್–ಪ್ರಶಾಂತ್ ನೀಲ್ ಕಾಂಬಿನೇಷನ್ನ ಬಹುನಿರೀಕ್ಷಿತ ‘ಸಲಾರ್’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ನಡೆಯಲಿದೆ. 2026ರಲ್ಲಿ ಎರಡನೇ ಭಾಗ ತೆರೆಕಾಣಲಿದೆ ಎಂದು ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಈ ಪ್ರಾಜೆಕ್ಟ್ಸ್ ಬಳಿಕ ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.