ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ತೆರೆ ಮೇಲೆ ಮಿಂಚಲು ಸಜ್ಜಾಗಿದೆ 'ಕೆಜಿಎಫ್‌'

Last Updated 31 ಅಕ್ಟೋಬರ್ 2019, 9:01 IST
ಅಕ್ಷರ ಗಾತ್ರ

ಬೆಳ್ಳಿ ಪರದೆ ಮೇಲೆ ಮತ್ತೊಮ್ಮೆ ಮಿಂಚಲು ಸಜ್ಜಾಗಿದೆಕೆಜಿಎಫ್‌.

ಹೌದು,ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆಜಿಎಫ್ ಅನ್ನು ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಪ್ರದರ್ಶನ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಬುಕ್ಕಿಂಗ್‌ಗಳು ಶುರುವಾಗಿದ್ದು, ಸಾಕಷ್ಟು ಜನ ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ 1ರಂದು ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಪ್ರದರ್ಶನಗಳು ನಿಗದಿಯಾಗಿವೆ. ಈಗಾಗಲೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು, ಟಿವಿಯಲ್ಲೂ ಈ ಸಿನಿಮಾ ಪ್ರಸಾರವಾಗಿದೆ. ಹೀಗಿದ್ದರೂ, ಕೂಡ ನವೆಂಬರ್‌ 1ರ ಪ್ರದರ್ಶನಕ್ಕೆ ಸಾಕಷ್ಟು ಮಂದಿ ಟಿಕೆಟ್ ಬುಕ್‌ ಮಾಡಿದ್ಧಾರೆ.

ಟಿಕೆಟ್‌ ದರ: ಪ್ರಮುಖವಾಗಿ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಶುಕ್ರವಾರ ಈ ಸಿನಿಮಾಕ್ಕೆ 2 ಶೋಗಳನ್ನು ನಿಗದಿ ಮಾಡಲಾಗಿದೆ. ಅದರ ಟಿಕೆಟ್‌ ದರ ಕೇವಲ ₹50 ಮಾತ್ರ.

ಕಾವೇರಿ ಚಿತ್ರಮಂದಿರ, ಗೋಪಾಲನ್‌ ಆರ್ಕೆಡ್‌, ಹಳೆ ಮದ್ರಾಸ್‌ ರಸ್ತೆಯಲ್ಲಿನ ಗೋಪಾಲನ್‌ ಮಲ್ಟಿಪ್ಲೆಕ್ಸ್‌, ಪುಷ್ಪಾಂಜಲಿ ಚಿತ್ರಮಂದಿರ, ಸ್ವಾಗತ್‌ ಶಂಕರ್‌ನಾಗ್‌ ಸಿನಿಮಾಸ್‌, ಊರ್ವಶಿ ಚಿತ್ರಮಂದಿರಗಳಲ್ಲಿ ಕೆಜಿಎಫ್‌ ಸಿನಿಮಾ ವೀಕ್ಷಿಸಬಹುದು.

ಯಶ್–ರಾಧಿಕಾ ಅವರಿಗೆ ಬುಧವಾರ ಗಂಡು ಮಗು ಹುಟ್ಟಿದೆ. ಇದರಿಂದ ಸಹಜವಾಗಿಯೇ ‘ರಾಕಿಭಾಯ್‌’ ಅಭಿಮಾನಿಗಳಿಗೆ ಸಂಭ್ರಮಗೊಂಡಿದ್ದಾರೆ. ಕೆಜಿಎಫ್‌ ಚಿತ್ರತಂಡ ಸಿನಿಮಾವನ್ನು ಮರು ಪ್ರದರ್ಶನ ನೀಡುವ ಸುದ್ದಿಯನ್ನು ನೀಡಿ ಆ ಸಂಭ್ರಮವನ್ನು ಇಮ್ಮಡಿಗೊಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT