2018ರ ಡಿಸೆಂಬರ್ 21 –ಕನ್ನಡ ಚಿತ್ರರಂಗದ ಪಾಲಿಗೆ ಅವಿಸ್ಮರಣೀಯ ದಿನ. ಅಂದು ಪ್ರಶಾಂತ್ ನೀಲ್ ನಿರ್ದೇಶನದ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 1’ ಚಿತ್ರ ತೆರೆ ಕಂಡಿತು. ಮುಂಬೈನ ಕೊಳೆಗೇರಿಗಳಲ್ಲಿ ಬೆಳೆದ ಹುಡುಗನೊಬ್ಬ ಅತಿದೊಡ್ಡ ಶ್ರೀಮಂತನಾಗುವ ಆಸೆಯ ಮೂಟೆ ಹೊತ್ತು ಕೋಲಾರದ ಚಿನ್ನದ ಗಣಿಗೆ ಬರುವುದೇ ಚಾಪ್ಟರ್ ಒಂದರ ಕಥೆ.

ಮೊದಲ ಅಧ್ಯಾಯದಲ್ಲಿ ಅರ್ಧ ಕಥೆಯನ್ನಷ್ಟೇ ಹೇಳಿದ್ದಾರೆ ಪ್ರಶಾಂತ್ ನೀಲ್. ‘ಕೆಜಿಎಫ್ ಚಾಪ್ಟರ್ 2’ರಲ್ಲಿ ಉಳಿದ ಕಥೆ ಹೇಳಲಿದ್ದಾರೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆ ಕಂಡ ‘ಕೆಜಿಎಫ್ ಚಾಪ್ಟರ್ 1’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ₹ 250 ಕೋಟಿ ಹೆಚ್ಚು ಗಳಿಕೆ ಕಂಡಿದ್ದು, ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ. ಜೊತೆಗೆ, ಚಂದನವನದಲ್ಲಿ ನೂರು ಕೋಟಿಯ ಕ್ಲಬ್‌ಗೆ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೂ ಭಾಜನವಾಯಿತು.

ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಈ ಚಿತ್ರದ ಮೊದಲ ದಿನದ ಗಳಿಕೆ ₹ 24 ಕೋಟಿ. ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಮೊದಲ ದಿನ ₹ 5 ಕೋಟಿ ಕಲೆಕ್ಷನ್ ಕಂಡಿತ್ತು. ಇದರ ಹಿಂದಿ ಅವತರಣಿಕೆಯ ಗಲ್ಲಾಪೆಟ್ಟಿಗೆಯೂ ₹ 50 ಕೋಟಿ ಬಾಚಿ ಕೊಂಡಿತ್ತು. ಹಿಂದಿ ಭಾಷೆಗೆ ಡಬ್ ಆಗಿ ಅತಿಹೆಚ್ಚು ಲಾಭ ಕಂಡಿರುವ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ‘ಕೆಜಿಎಫ್ ಚಾಪ್ಟರ್ 1’ಗೆ ಅಗ್ರಸ್ಥಾನ.

ಡಿಜಿಟಲ್ ಮಾರುಕಟ್ಟೆಯಲ್ಲೂ ಈ ಚಿತ್ರ ಪರಾಕ್ರಮ ಮೆರೆದಿದ್ದು ಮತ್ತೊಂದು ವಿಶೇಷ. 2019ನೇ ಸಾಲಿನಡಿ ಅಮೆಜಾನ್ ಪ್ರೈಮ್‌ನಲ್ಲಿ ಅತಿಹೆಚ್ಚು ಜನರು ವೀಕ್ಷಿಸಿದ ಭಾರತ ಸಿನಿಮಾ ಎಂಬ ಕೀರ್ತಿಗೂ ಪಾತ್ರವಾಯಿತು. ಜೊತೆಗೆ, 66ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ಪ್ರಶಸ್ತಿಗಳಿಸಿದ್ದು ಇದರ ಮತ್ತೊಂದು ಹೆಗ್ಗಳಿಕೆ.

2019ನೇ ಸಾಲಿನ ‘ಸೈಮಾ’ ಪ್ರಶಸ್ತಿ ವಿಭಾಗದಲ್ಲೂ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಸ್ಟೈಲ್ ಐಕಾನ್ ಆಫ್ ದಿ ಇಯರ್, ಅತ್ಯುತ್ತಮ ನಿರ್ದೇಶಕ, ಪೋಷಕ ನಟಿ, ಛಾಯಾಗ್ರಹಣ, ಸಂಗೀತ, ಪೋಷಕ ನಟ ಹಾಗೂ ಹಿನ್ನೆಲೆ ಗಾಯಕ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡಿದ್ದು ಇದರ ವಿಶೇಷ.

‘ಕೆಜಿಎಫ್ ಚಾಪ್ಟರ್ 2’ ಕೂಡ ಮೊದಲ ಅಧ್ಯಾಯದಷ್ಟೇ ಕುತೂಹಲ ಹೆಚ್ಚಿಸಿದೆ. ಬಾಲಿವುಡ್ ನಟ ಸಂಜಯ್ ದತ್ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ, ಅಧೀರನ ಪಾತ್ರದಲ್ಲಿ ಸಂಜಯ್ ದತ್ ಅವರ ಲುಕ್ ನೋಡಿ ಜನರು ಬೆರಗಾಗಿದ್ದಾರೆ. ಇಂದು ಸಂಜೆ 5.45ಕ್ಕೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.