ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಸಿಎಂ ಭೇಟಿಯಾದ ಯಶ್‌, ರಾಧಿಕ ಪಂಡಿತ್‌: ಉದ್ದೇಶ ಏನಿರಬಹುದು?

Last Updated 4 ಮೇ 2022, 11:03 IST
ಅಕ್ಷರ ಗಾತ್ರ

ಪಣಜಿ: ಕೆ.ಜಿ.ಎಫ್‌–2 ಸಿನಿಮಾದ ನಾಯಕ ರಾಕಿಂಗ್‌ ಸ್ಟಾರ್ ಯಶ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆ.

ಯಶ್‌, ಪತ್ನಿ ರಾಧಿಕಾ ಪಂಡಿತ್‌ ಹಾಗೂ ಕೆಜಿಎಫ್‌ ಚಿತ್ರ ತಂಡದ ಸದಸ್ಯರು ಮುಖ್ಯಮಂತ್ರಿಗಳ ನಿವಾಸದಲ್ಲಿ ಪ್ರಮೋದ್‌ ಸಾವಂತ್‌ ಅವರನ್ನು ಭೇಟಿಮಾಡಿದ್ದಾರೆ.

ಈ ಬಗ್ಗೆ ಪ್ರಮೋದ್‌ ಸಾವಂತ್‌ ಟ್ವೀಟ್‌ ಮಾಡಿದ್ದು, ರಾಕಿಂಗ್‌ ಸ್ಟಾರ್‌ ಯಶ್‌, ರಾಧಿಕಾ ಪಂಡಿತ್‌ ಹಾಗೂ ಕೆಜಿಎಫ್‌ ಚಿತ್ರದ ತಂಡವನ್ನು ಭೇಟಿ ಮಾಡಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ. ಹಾಗೇ ಭೇಟಿಯ ಚಿತ್ರಗಳನ್ನು ಅವರು ಶೇರ್‌ ಮಾಡಿದ್ದಾರೆ.

ಯಶ್‌ ಹಾಗೂ ಗೋವಾ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿರುವ ವಿಚಾರಗಳು ಬಹಿರಂಗವಾಗಿಲ್ಲ. ಆದಾಗ್ಯೂ ಅಭಿಮಾನಿಗಳು ಭೇಟಿಯ ಫೋಟೊಗಳನ್ನು ಶೇರ್‌ ಮಾಡಿಕೊಂಡು ಯಶ್‌ ಅವರ ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಯಶ್‌ ರಾಜಕೀಯಕ್ಕೆ ಬರಬಹುದು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಯಶ್‌ ದೊಡ್ಡ ಬಜೆಟ್‌ ಸಿನಿಮಾ ಮಾಡುತ್ತಿದ್ದು ಗೋವಾದಲ್ಲಿ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿರಬಹುದು ಎಂದು ಕೆಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಸದ್ಯ ಕೆಜಿಎಫ್‌ –2 ಸಿನಿಮಾ ಸಾವಿರ ಕೋಟಿ ಕ್ಲಬ್‌ ಸೇರಿದೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಹಿಂದಿ, ತೆಲುಗು ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT