ನಟ ದೇವರಾಜ್ ಅವರ ಕಿರಿಯ ಪುತ್ರ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ರಿಲೀಸ್ಗೆ ಸಜ್ಜಾಗುತ್ತಿದೆ. ಶ್ರೀಕಾಂತ್ ಹುಣಸೂರು ನಿರ್ದೇಶನದ ಈ ಸಿನಿಮಾದ ಹೊಸ ಹಾಡೊಂಡು ಬಿಡುಗಡೆಯಾಗಿದೆ. ಸಿನಿಮಾ ಆ.22ರಂದು ತೆರೆಕಾಣುತ್ತಿದೆ.

ಈ ಸಿನಿಮಾದಲ್ಲಿ ಪ್ರಣಂಗೆ ಜೋಡಿಯಾಗಿ ‘ದಿಯಾ’ ಖ್ಯಾತಿಯ ಖುಷಿ ರವಿ ನಟಿಸಿದ್ದಾರೆ.

‘ಮಿಡ್ ನೈಟ್ ರಸ್ತೆಯಲ್ಲಿ...’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ಸಂಜಿತ್ ಹೆಗಡೆ ದನಿಯಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಹಾಡಿಗಿದೆ. ‘ನಮ್ಮ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇದು ಎರಡನೇ ಹಾಡು. ಉಳಿದ ಎರಡು ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ’ ಎಂದಿದ್ದಾರೆ ಸಚಿನ್ ಬಸ್ರೂರ್.

‘ಈ ಚಿತ್ರ ಅಪ್ಪ-ಮಗನ ಬಾಂಧವ್ಯ ಕುರಿತಾದ ಕಥಾಹಂದರ ಹೊಂದಿದೆ. ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಅಪ್ಪ–ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ವಾರಾಣಸಿಯಲ್ಲಿ ನಡೆದಿದೆ’ ಎಂದಿದ್ದಾರೆ ಶ್ರೀಕಾಂತ್ ಹುಣಸೂರು.

‘ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿಲ್ಲ. ಬಾಂಧವ್ಯದ ಕಥೆಯ ಜೊತೆಗೆ ಪ್ರೇಮಕಥೆಯೂ ಇದೆ. ರಂಗಾಯಣ ರಘು ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಏಳೂವರೆ ವರ್ಷಗಳ ನಂತರ ನನ್ನ ಸಿನಿಮಾ ಬಿಡುಗಡೆಯಾಗುತ್ತಿದೆ’ ಎಂದರು ಪ್ರಣಂ. ಚಿತ್ರದಲ್ಲಿ ವೈದ್ಯೆಯಾಗಿ ಖುಷಿ ರವಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.