ಶನಿವಾರ, ಸೆಪ್ಟೆಂಬರ್ 18, 2021
26 °C

ಶೇರ್‌ಶಾ ಚಿತ್ರದ ಪ್ರಚಾರದಲ್ಲಿ ಕಿಯಾರ ಅಡ್ವಾಣಿ ಜತೆ ಸಿದ್ಧಾರ್ಥ್ ಮಲ್ಹೋತ್ರಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Kiara Advani Instagram screengrab

ಬೆಂಗಳೂರು: ಬಾಲಿವುಡ್‌ನ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರ ಅಡ್ವಾಣಿ ಅಭಿನಯದ ಶೇರ್‌ಶಾ ಚಿತ್ರ ತೆರೆಕಾಣಲು ಸಜ್ಜಾಗಿದೆ.

ಸಿದ್ಧಾರ್ಥ್ ಹಾಗೂ ಕಿಯಾರ ಇಬ್ಬರೂ ಜತೆಯಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ.

ಶೇರ್‌ಶಾ ಚಿತ್ರಕ್ಕೆ ಸಂಬಂಧಿಸಿ ನಟಿ ಕಿಯಾರಾ ಅಡ್ವಾಣಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊದಲ್ಲಿ ಸಿದ್ಧಾರ್ಥ ಬಳಿ ನಟಿ ಕಿಯಾರ ನಡೆದು ಬರುತ್ತಿರುವ ದೃಶ್ಯವಿದೆ. ಕಿಯಾರಾಳನ್ನು ನಟ ಸಿದ್ಧಾರ್ಥ ನೋಡುತ್ತಾ, ಆಕೆಯೊಂದಿಗೆ ಮುಂದೆ ಹೆಜ್ಜೆ ಹಾಕುತ್ತಾರೆ. ಈ ವಿಡಿಯೊವನ್ನು ಕಿಯಾರ ಮತ್ತು ಸಿದ್ಧಾರ್ಥ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಈ ವಿಡಿಯೊಗೆ ‘ರಾಂಜಾ’ ಎಂಬ ಅಡಿಬರಹ ನೀಡಿರುವ ಕಿಯಾರ, ಅದರ ಜತೆಗೆ ಹೃದಯದ ಎಮೋಜಿ ಕೂಡ ಬಳಸಿದ್ದಾರೆ.

ಕಾರ್ಗಿಲ್ ಹೀರೊ, ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಕಥೆಯನ್ನೊಳಗೊಂಡ ಶೇರ್‌ಶಾ ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು