ಎಂಜಿಪಿ ಕ್ರಿಯೆಷನ್ಸ್ ಅರ್ಪಿಸುವ ನಿರಂತರ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣವಾದ ‘ಐರಾವನ್’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರದಲ್ಲಿ ಜಯರಾಂ ಕಾರ್ತಿಕ್, ಅದ್ವಿತಿ ಶೆಟ್ಟಿ, ಅಭಯ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಕೆ ‘ಡೆಡ್ಲಿ 2ದಿಂದ ನನ್ನ ಸಿನಿ ಜರ್ನಿ ಆರಂಭವಾಗಿತ್ತು. ನನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಜಾಕ್ ಮಂಜು ಅವರು. ನಂತರ ಸ್ವಲ್ಪದಿನ ಚಿತ್ರರಂಗದಿಂದ ದೂರ ಉಳಿದೆ. ಕೆಂಪೇಗೌಡ–2 ಚಿತ್ರದ ಮೂಲಕ ಮತ್ತೆ ಸಿನಿಮಾ ಮಾಡಲು ಆರಂಭಿಸಿದೆ. ಟೀಮ್ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಆಡಬೇಕು ಎಂಬ ಕನಸಿತ್ತು. ಆದರೆ ಸಿಸಿಎಲ್ನಲ್ಲಿ ಆಡುವ ಮೂಲಕ ಆ ಕನಸನ್ನು ನನಸು ಮಾಡಿದ್ದಾರೆ ಕಿಚ್ಚ ಸುದೀಪ್ ಅವರು. ನನ್ನ ಕಷ್ಟ, ಸುಖ ಎರಡರಲ್ಲೂ ಅವರು ಜೊತೆಯಾಗಿದ್ದಾರೆ. ಇನ್ನೂ ಈ ಸಿನಿಮಾ ಬಗ್ಗೆ ಹೇಳುವುದಾದರೆ ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ಯೋಚಿಸಿದ್ದೆವು. ನಿರಂತರ್ ಅವರು ಬಹಳ ಬೇಗ ಈ ಸಿನಿಮಾವನ್ನು ಮುಗಿಸಲು ಸಹಾಯ ಮಾಡಿದ್ದಾರೆ’ ಎಂದು ತಮ್ಮ ಸಿನಿ ಪಯಣ, ಸಿಸಿಎಲ್ ಹಾಗೂ ‘ಐರಾವನ್’ ಸಿನಿಮಾದ ಕುರಿತು ಮಾತನಾಡಿದರು.

ರಾಮ್ಸ್ ರಂಗ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಿರಂತರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರದ ತಾಂತ್ರಿಕವರ್ಗದಲ್ಲಿ ಎಸ್. ಪ್ರದೀಪ್ ವರ್ಮಾ ಅವರ ಸಂಗೀತ, ದೇವೇಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಹರಿ ಸಂತೋಶ್ ಸಾಹಿತ್ಯ, ಕಾಂತರಾಜು ಕಡ್ಡಿಪುಡಿ ಸಂಭಾಷಣೆ ಬರೆದಿದ್ದಾರೆ. ಸಾಯಿ ಚರಣ್ ಮತ್ತು ಆರ್. ಲೋಹಿತ್ ನಾಯ್ಕ್ ಸಹ ನಿರ್ದೇಶನ ಮಾಡಿದ್ದಾರೆ. ಕುಂಗ್ ಫು ಚಂದ್ರು ಸಾಹಸ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.