ಭಾನುವಾರ, ಜುಲೈ 3, 2022
22 °C

ನಟ ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಟೀಸರ್‌ ಬಿಡುಗಡೆ ಏ.2ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ದ ಟೀಸರ್‌ ಏ.2ರಂದು ಬೆಳಗ್ಗೆ 9.55ಕ್ಕೆ ಬಿಡುಗಡೆಯಾಗಲಿದೆ.

ಈ ಕುರಿತು ಅನೂಪ್‌ ಭಂಡಾರಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. 2021ರ ಆ.19ರಂದೇ ತೆರೆ ಕಾಣಬೇಕಿದ್ದ ‘ವಿಕ್ರಾಂತ್‌ ರೋಣ’ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದಾದ ಬಳಿಕ 2022 ಫೆ.24ರಂದು ಚಿತ್ರ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಕೋವಿಡ್‌ ಮೂರನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಹೇರಿದ್ದ ನಿರ್ಬಂಧದ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಚಿತ್ರತಂಡವು ಕೊನೆಯ ಕ್ಷಣದಲ್ಲಿ ಮುಂದೂಡಿತ್ತು. ಇದಾದ ಬಳಿಕ ‘ಪುಷ್ಪ’, ‘ಆರ್‌ಆರ್‌ಆರ್‌’, ‘ಜೇಮ್ಸ್‌’, ‘ಕೆ.ಜಿ.ಎಫ್‌–2’ ಸೇರಿದಂತೆ ಸಾಲುಸಾಲು ಪ್ಯಾನ್‌ ಇಂಡಿಯಾ ಸಿನಿಮಾಗಳ ಬಿಡುಗಡೆಗೆ ಚಿತ್ರತಂಡವು ಕಾದಿತ್ತು. ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದೀಗ ಚಿತ್ರ ಬಿಡುಗಡೆಯಾಗುವ ದಿನಾಂಕ ಘೋಷಣೆಗೂ ಮುನ್ನ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ಬಿಡುಗಡೆಗೆ ರೂಟ್‌ ಮ್ಯಾಪ್‌ ಒಂದನ್ನು ಚಿತ್ರತಂಡ ಸಿದ್ಧಪಡಿಸಿದೆ. ಮೊದಲಿಗೆ ಟೀಸರ್‌, ನಂತರದಲ್ಲಿ ಕ್ರಮವಾಗಿ ‘ಹೇ ಫಕೀರ’, ‘ಗುಮ್ಮ ಬಂದ ಗುಮ್ಮ’, ‘ಲಲಬೈ’, ‘ಚಿಕ್ಕಿ ಬೊಂಬೆ’, ‘ಗಡಂಗ್‌ ರಕ್ಕಮ್ಮ’ ಹಾಡುಗಳ ಬಿಡುಗಡೆಯಾಗಲಿದೆ. ಇದಾದ ಬಳಿಕ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ಚಿತ್ರತಂಡವು ತಿಳಿಸಿದೆ.

ಒಟಿಟಿಯಿಂದಲೂ ಭರ್ಜರಿ ಆಫರ್‌: ‘ವಿಕ್ರಾಂತ್‌ ರೋಣ‘ ಚಿತ್ರಕ್ಕೆ ಒಟಿಟಿ ವೇದಿಕೆಯಿಂದಲೂ ಭರ್ಜರಿ ಆಫರ್‌ ಬಂದಿದೆ. ಸುಮಾರು ₹ 90 ಕೋಟಿವರೆಗೆ ಆಫರ್‌ ಬಂದಿದೆ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ಅವರು ಇತ್ತೀಚೆಗೆ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು