ಭಾನುವಾರ, ಜನವರಿ 26, 2020
29 °C

ಕಿಚ್ಚ ಸುದೀಪ್ ಬೆನ್ನು ಬಿಡದ ವಿಲನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಸಲ್ಮಾನ್‌ ಖಾನ್‌ ಅಭಿನಯದ ಬಾಲಿವುಡ್‌ ಚಿತ್ರ ‘ದಬಾಂಗ್‌–3’ರ ಬಳಿಕ ಕಿಚ್ಚ ಸುದೀಪ್‌ ಮತ್ತೊಮ್ಮೆ ವಿಲನ್‌ ರೂಪದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ತಮಿಳು ನಟ ಸಿಂಬು ಅವರ ಬಹುನಿರೀಕ್ಷಿತ ‘ಮಾನಾಡು’ ಚಿತ್ರದಲ್ಲಿ ಸುದೀಪ್‌ ವಿಲನ್‌ ಪಾತ್ರದಲ್ಲಿ ನಟಿಸಲಿದ್ದಾರಂತೆ. 

‘ಮಾನಾಡು’ ಸಿನಿಮಾ ಜನವರಿ ತಿಂಗಳಷ್ಟರಲ್ಲಿ ಸೆಟ್ಟೇರಲಿದೆ. ಆದ್ರೆ ಈವರೆಗೂ ಚಿತ್ರದ ವಿಲನ್‌ ಯಾರೆಂದು ನಿರ್ಧಾರವಾಗಿಲ್ಲ. ಮೂಲ‌ಗಳ ಪ್ರಕಾರ, ಅಭಿನಯ ಚಕ್ರವರ್ತಿ ಸುದೀಪ್‌ ಅವರನ್ನ ವಿಲನ್‌ ಪಾತ್ರಕ್ಕೆ ಆರಿಸಲಾಗಿದೆ ಎಂಬ ತಿಳಿದು ಬಂದಿದೆ. ಈ ಹಿಂದೆ ತಮಿಳು ನಟ ವಿಜಯ್‌ ಅವರ ‘ಪುಲಿ’ ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು.  

ಸುದೀಪ್‌ಗೂ ಮುನ್ನ ‘ಮಾನಾಡು ’ಚಿತ್ರತಂಡ, ವಿಲನ್‌ ಪಾತ್ರದಲ್ಲಿ ನಟಿಸುವಂತೆ ಅರವಿಂದ್‌ ಸ್ವಾಮಿ ಅವರಿಗೆ ಆಫರ್‌ ನೀಡಿತ್ತು. ಆದ್ರೆ ಅರವಿಂದ್‌ ಆಫರ್‌ನ್ನು ಸ್ವೀಕರಿಸಿಲ್ಲ. ಈ ಸಿನಿಮಾವನ್ನು ವೆಂಕಟ್‌ ಪ್ರಭು ನಿರ್ದೇಶಿಸಿದ್ದು, ಸುರೇಶ್‌ ಕಾಮಾಚಿ ಬಂಡವಾಳ ಹೂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು