ಬಾಲಿವುಡ್‌ನಲ್ಲಿ ‘ಕಿಸಾನ್’ ಆಗಲಿದ್ದಾರೆ ನಟ ಸೋನು ಸೂದ್

ರೀಲ್‌ನಲ್ಲಿ ವಿಲನ್ ಆಗಿರುವ, ರಿಯಲ್ ಲೈಫ್ ಹೀರೊ ನಟ ಸೋನು ಸೂದ್ ‘ಕಿಸಾನ್’ ಆಗಲಿದ್ದಾರೆ. ಇದೇನಪ್ಪಾ ಸೋನು ಕೃಷಿಕ ಆಗಲು ಹೊರಟಿದ್ದಾರಾ ಎಂದು ಯೋಚಿಸಬೇಡಿ. ‘ಕಿಸಾನ್’ ಸೋನು ಅವರ ಮುಂದಿನ ಬಾಲಿವುಡ್ ಚಿತ್ರ. ಈ ಚಿತ್ರಕ್ಕೆ ಇ. ನಿವಾಸ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
‘ಡ್ರೀಮ್ ಗರ್ಲ್’ ಚಿತ್ರದ ನಿರ್ದೇಶಕ ರಾಜ್ ಶಾಂಡಿಲ್ಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರು ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರೈತರು ನಮ್ಮ ದೇಶದ ಹೆಮ್ಮೆ ಎಂದಿದ್ದಾರೆ. ‘ನನ್ನ ಮುಂದಿನ ಚಿತ್ರ ಕಿಸಾನ್, ಇದರಲ್ಲಿ ಸೋನು ಸೂದ್ ನಾಯಕ. ಇ. ನಿವಾಸ್ ಚಿತ್ರ ನಿರ್ದೇಶನ ಮಾಡಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಈ ಸಿನಿಮಾ ಘೋಷಣೆಯಾದ ಕೆಲ ಕ್ಷಣಗಳಲ್ಲೇ ಚಿತ್ರಕ್ಕೆ ಶುಭ ಹಾರೈಸಿದ್ದಾರೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್. ‘ಕಿಸಾನ್ ತಂಡಕ್ಕೆ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದ ಅಮಿತಾಬ್ ಇ.ನಿವಾಸ್ ಹಾಗೂ ಸೋನು ಅವರನ್ನು ಟ್ಯಾಗ್ ಮಾಡಿದ್ದರು. ಅವರ ಟ್ವೀಟ್‌ಗೆ ಸೋನು ‘ತುಂಬಾ ಧನ್ಯವಾದಗಳು ಸರ್’ ಎಂದು ಉತ್ತರಿಸಿದ್ದಾರೆ.
T 3773 - All good wishes to film #Kisaan , directed by #ENiwas and acted by @SonuSood ..
— Amitabh Bachchan (@SrBachchan) January 4, 2021
ಸದ್ಯ ಸೋನು ತೆಲುಗಿನ ಅಲ್ಲುಡು ಅಧುರ್ಸ್, ತಮಿಳಿರಸನ್ ಹಾಗೂ ಆಚಾರ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.