ಬುಧವಾರ, ನವೆಂಬರ್ 25, 2020
26 °C
ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ-3 ಚಿತ್ರ

ನ.15ರಂದು ಪಟಾಕಿ ಪೋರಿಯೋ ಹಾಡು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ-3 ಚಿತ್ರದ ಪಟಾಕಿ ಪೋರಿಯೋ ಹಾಡಿನ ಸಾಹಿತ್ಯ ಸಹಿತ ವಿಡಿಯೋ ನ.15ರಂದು ಬಿಡುಗಡೆ ಆಗಲಿದೆ. 

ಹಾಡಿನ ದೃಶ್ಯದಲ್ಲಿ ಸುದೀಪ್‌ ಮತ್ತು ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ವಿಜಯ ಪ್ರಕಾಶ್‌ ಮತ್ತು ಅನುರಾಧಾಭಟ್‌ ಹಾಡಿದ್ದಾರೆ. ಅನೂಪ್‌ ಭಂಡಾರಿ ಹಾಡಿನ ಸಾಹಿತ್ಯ ಬರೆದಿದ್ದಾರೆ.

ಈಗಾಗಲೇ ಹಾಡಿನ ಒಂದು ಸಾಲಿನ ತುಣುಕು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ಅಧಿಕೃತ ಬಿಡುಗಡೆ ಇನ್ನಷ್ಟೇ ಆಗಬೇಕಿದೆ. ಸೂರಪ್ಪ ಬಾಬು ಈ ಚಿತ್ರದ ನಿರ್ಮಾಪಕರು. 

ಸುದೀಪ್‌ ಜತೆಗೆ ಮಡೊನ್ನಾ ಸೆಬಾಸ್ಟಿಯನ್‌, ಅಫ್ತಾಬ್‌ ಶಿವದಾಸಿ, ನವಾಬ್‌ ಷಾ ಮತ್ತು ಶ್ರದ್ಧಾ ದಾಸ್‌ ಕೂಡಾ ತೆರೆಯಲ್ಲಿ ಮಿಂಚಲಿದ್ದಾರೆ.

ಚಿತ್ರವನ್ನು ಶಿವಕಾರ್ತಿಕ್‌ ಅವರು ನಿರ್ದೇಶಿಸಿದ್ದಾರೆ. ಈ ಬಾರಿಯ ಬಹು ನಿರೀಕ್ಷಿತ ಚಿತ್ರವಿದು. ಕೋವಿಡ್‌ ಕಾರಣಕ್ಕೆ ಚಿತ್ರೀಕರಣ ತಡವಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು