ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಗ್‌ ಬಜೆಟ್‌ ಚಿತ್ರ ‘ಕೃಷ್ಣಂ ಪ್ರಣಯ ಸಖಿ’

Published 8 ಜುಲೈ 2024, 12:39 IST
Last Updated 8 ಜುಲೈ 2024, 12:39 IST
ಅಕ್ಷರ ಗಾತ್ರ

ಗಣೇಶ್‌ ನಟನೆಯ 41ನೇ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಆಗಸ್ಟ್‌ 15ರಂದು ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಪ್ರಚಾರ ಆರಂಭಿಸಿದೆ. ಪ್ರಚಾರದ ಅಂಗವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ‘ಇದು ನನ್ನ ಈವರೆಗಿನ ವೃತ್ತಿ ಜೀವನದ ಬಿಗ್‌ ಬಜೆಟ್‌ ಸಿನಿಮಾ’ ಎಂದಿದ್ದಾರೆ ಗಣೇಶ್‌.

‘ದಂಡುಪಾಳ್ಯ’ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ ಆರಂಭದಲ್ಲೇ ಅವರು ಎಂಟು ನಾಯಕಿಯರು ಸಿನಿಮಾದಲ್ಲಿದ್ದಾರೆ ಎಂದಾಗ ‘ಓ ಇದು ನನ್ನ ಜಾನರ್‌ನ ಚಿತ್ರ’ ಎಂದೆನಿಸಿತು. ‘ಕೃಷ್ಣಂ ಪ್ರಣಯ ಸಖಿ’ ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು ಸಂತೋಷವಾಗಿದೆ. ಅದ್ದೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ’ ಎಂದಿದ್ದಾರೆ ಗಣೇಶ್‌. 

ತ್ರಿಶೂಲ್ ಎಂಟರ್‌ಟೇನ್ಮೆಂಟ್‌ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾಯಕಿಯರಾದ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಗಣೇಶ್‌ 
ಗಣೇಶ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT