ಬುಧವಾರ, ಆಗಸ್ಟ್ 10, 2022
23 °C

ಬಾಡಿಗೆ ತಾಯಿಯಾಗಿದ್ದಾರೆ ಕೃತಿ ಸನೊನ್: ಫೋಟೊ ಶೇರ್ ಮಾಡಿದ ನಟಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Kriti Sanon Instagram Post

ಬೆಂಗಳೂರು: ನಟಿ ಕೃತಿ ಸನೊನ್ ಗರ್ಭಿಣಿಯಾಗಿದ್ದಾರೆ. ಅದು ಕೂಡ ಬಾಡಿಗೆ ತಾಯಿಯಾಗಿ.. ತಮ್ಮ ಹೊಸ ಚಿತ್ರ ‘ಮಿಮಿ’ ಫಸ್ಟ್ ಲುಕ್ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಡಿಗೆ ತಾಯ್ತನದ ವಿಚಾರ ಹೊಂದಿರುವ ಚಿತ್ರ ‘ಮಿಮಿ’ಯಲ್ಲಿ ಕೃತಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ.

ತುಂಬು ಗರ್ಭಿಣಿಯಾಗಿ ಇರುವ ಚಿತ್ರವನ್ನು ನಟಿ ಕೃತಿ ಪೋಸ್ಟ್ ಮಾಡಿದ್ದು, ನೀವು ಅಂದುಕೊಂಡಿರುವಂತೆ ಏನೂ ಇಲ್ಲ ಎಂಬ ಅಡಿಬರಹ ಕೂಡ ನೀಡಿದ್ದಾರೆ.

ಅಲ್ಲದೆ, ‘ಮಿಮಿ’ ಕುರಿತು ಇನ್ನಷ್ಟು ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ ಎಂದು ನಟಿ ಕೃತಿ ಹೇಳಿದ್ದಾರೆ.

ಲಕ್ಷ್ಮಣ್ ಉಟೇಕರ್ ಮಿಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕಾಗಿ ನಟಿ ಕೃತಿ, 15 ಕೆ.ಜಿ. ತೂಕ ಕೂಡ ಏರಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು