ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ‘ಕ್ಷಿಪ್ರ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಕುಂಬಳ ಕಾಯಿ ಒಡೆದು ಸಂಭ್ರಮಿಸಿದೆ.

ಮಹಿಳಾ ಪ್ರಧಾನ ಕಥೆಯ ಈ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೂ ಇದ್ದು, ಸತೀಶ್ ಕೃಷ್ಣ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ದಕ್ಷ್ ನಾಯಕನಾಗಿ ನಟಿಸಿದ್ದು, ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ರಮ್ಯಪ್ರಿಯಾ ಮತ್ತು ಪ್ರೀತಿ ಮೀರಜ್‌ಕರ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಬೆಂಗಳೂರು, ಕೋಲಾರ, ಕೆಜಿಎಫ್, ಬ್ಯಾಲಕೆರೆ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಲಾಕ್‌ಡೌನ್ ವೇಳೆ ಎಡಿಟಿಂಗ್ ಮುಗಿಸಿದ್ದು, ಅನ್‌ಲಾಕ್ ಅವಧಿಯಲ್ಲಿ ಡಬ್ಬಿಂಗ್ ಕೂಡ ಪೂರ್ಣಗೊಳಿಸಿದೆ. ಸದ್ಯ ಧನುಷ್ ಸ್ಟುಡಿಯೊದಲ್ಲಿ ಚಿತ್ರೀಕರಣೋತ್ತರ ಕೆಲಸಗಳಲ್ಲಿ ಚಿತ್ರತಂಡ ತೊಡಗಿದೆ. ಸದ್ಯದಲ್ಲೇ ಫಸ್ಟ್‌ಲುಕ್ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

ತಾರಾಗಣದಲ್ಲಿ ಮೋಹನ್‌ಜುನೇಜ, ನಾಗೇಂದ್ರ ಅರಸ್, ಕಾರ್ತಿಕ್ ವೈಭವ್, ಅರಸು, ಚೇತನ್‌ಕೃಷ್ಣನ್, ಪ್ರಸನ್ನ ಮಾದವ್, ನಂದಗೋಪಾಲ್, ಯಶೋಧಾ, ಲಕ್ಷೀ, ಪಾವನಿ, ಪ್ರಿಯಾಂಕ ದಿನೇಶ್, ಹರ್ಷಾ, ನಂದನ್, ಕಬಾಬ್ ಮಂಜು, ಸುನಿಲ್ ಜೆ., ಚೇತನ್‌ದುರ್ಗಾ, ಧನ್‌ಲಾಲ್, ರವಿಲೀ ಮತ್ತು ವಿಕ್ರಾಂತ್ ಇದ್ದಾರೆ.

ಅನನ್ಯಭಟ್, ರ‍್ಯಾಪಿಡ್ ರಶ್ಮಿ, ಚೇತನ್‌ನಾಯಕ್, ಅಭಿಷೇಕ್ ಕೋಡ್ಯಾಲ್, ಅರವಿಂದ್ ಮುಕುಂದನ್ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ. ವರದರಾಜ್-ಸಮರ್ಥ್-ಅಂಜಾನ್ ಸಾಹಿತ್ಯದ ಗೀತೆಗಳಿಗೆ ವಿಕ್ಟರ್‌ಲೋಗಿ ಸಂಗೀತವಿದೆ. ಛಾಯಾಗ್ರಹಣ ಸತೀಶ್‌ರಾಜೇಂದ್ರನ್, ಸಂಕಲನ ಮಣಿಯನ್, ಸಾಹಸ ಕುಂಗ್ ಫು ಚಂದ್ರು, ಕಿಶೋರ್-ನವೀನ್ ನೃತ್ಯ ನಿರ್ವಹಿಸಿದ್ದಾರೆ.

ಪ್ಯೂರ್‌ವಿಷನ್ ಎಂಟರ್‌ಟೈನ್‌ಮೆಂಟ್ಸ್‌ನಡಿ ದಿನೇಶ್ ಕೆ.ರಾಮನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.