ಬುಧವಾರ, ಮಾರ್ಚ್ 22, 2023
21 °C

ನೋಡಿ: ಪವನ್‌ ಕುಮಾರ್‌ ನಿರ್ದೇಶನದ ತೆಲುಗು ವೆಬ್‌ ಸರಣಿಯ ಟೀಸರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

'ಕುಡಿ ಎಡಮೈತೆ' ತೆಲುಗು ವೆಬ್‌ ಸರಣಿಯ ಪೋಸ್ಟರ್‌–ಚಿತ್ರ: ಪವನ್‌ ಕುಮಾರ್ ಫೇಸ್‌ಬುಕ್‌ ಪುಟದಿಂದ

ತೆಲುಗಿನ ವೆಬ್‌ ಸರಣಿಯ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಥ್ರಿಲ್ಲರ್‌ ಕಂಟೆಟ್‌ ಇಷ್ಟ ಪಡುವವರ ಗಮನ ಸೆಳೆದಿದೆ. ಅಮಲಾ ಪೌಲ್‌ ಈ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕರ್ನಾಟಕದ ಪವನ್‌ ಕುಮಾರ್‌ ನಿರ್ದೇಶಿಸಿರುವ 'ಕುಡಿ ಎಡಮೈತೆ' ತೆಲುಗು ವೆಬ್‌ ಸರಣಿಯು ಆಹಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಜುಲೈ 16ರಿಂದ ಪ್ರಸಾರವಾಗಲಿದೆ. ಈ ಕ್ರೈಂ ಥ್ರಿಲ್ಲರ್‌ ಸರಣಿಯ ಟೀಸರ್‌ ಪ್ರಕಾರ, ಅಮಲಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ರಾಹುಲ್‌ ವಿಜಯ್‌ ಡೆಲಿವರಿ ಬಾಯ್‌ ಆಗಿ ಅಭಿನಯಿಸಿದ್ದಾರೆ.

'ನಿಮ್ಮ ಜೀವನದಲ್ಲಿ ಅದೇ ಘಟನೆಗಳು ಮತ್ತೆ ಮತ್ತೆ ಆದಂತೆ ನಿಮಗೆ ಅನಿಸಿದ್ಯಾ?' ಎಂಬ ಅರ್ಥದಲ್ಲಿರುವ ಡೈಲಾಗ್‌ ಮೂಲಕ ಟೀಸರ್‌ ತೆರೆದುಕೊಳ್ಳುತ್ತದೆ. ಪೊಲೀಸ್‌ ವಾಹನ, ಡೆಲಿವರಿ ಬಾಯ್‌ನ ಬೈಕ್‌ ನಡುವೆ ಅಪಘಾತ; ಆತಂಕ, ಫೋನ್‌ ಕರೆ, ಕನಸು,....ಹೀಗೆ ಪಟಪಟನೆ ದೃಶ್ಯ ಸರಣಿ ಹಿಂದೆ–ಮುಂದೆ ಚಲಿಸಿ ನಿಲ್ಲುತ್ತವೆ. ಬಿಡಿಸಲಾಗದ ಅಪರಾಧ ಕೃತ್ಯದಲ್ಲಿ ಸಿಕ್ಕಿ ಕೊಂಡಿರುವರೇ ಅಥವಾ ಕಲ್ಪನೆಯಲ್ಲಿ ಮುಳುಗಿರುವರೇ? ಎಲ್ಲವೂ ಭ್ರಮೆಯೇ,...ಎಂಬೆಲ್ಲ ಯೋಚನೆಗಳು ಟೀಸರ್‌ ಜೊತೆಗೆ ಸುಳಿದಾಡುತ್ತವೆ.

ಯೂ–ಟರ್ನ್‌, ಲೂಸಿಯಾ ಸಿನಿಮಾ ಖ್ಯಾತಿಯ ಪವನ್‌ ಕುಮಾರ್‌, ನಟ ಪುನೀತ್ ರಾಜ್‌ಕುಮಾರ್‌ ಅಭಿನಯಿಸುತ್ತಿರುವ 'ದ್ವಿತ್ವ' ಚಿತ್ರದ ಸಾರಥ್ಯ ವಹಿಸಿದ್ದು, ಜುಲೈ 1ರಂದು ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ.

ಇದನ್ನೂ ಓದಿ:  ಸೆಟ್ಟೇರಿತು ಹೊಂಬಾಳೆಯ ‘ದ್ವಿತ್ವ’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು