ಸೋಮವಾರ, ಅಕ್ಟೋಬರ್ 3, 2022
24 °C

‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕೆ ಹಣ ಕೊಟ್ಟು ಟ್ರೋಲ್‌ ಮಾಡಲಾಗುತ್ತಿದೆ: ನಿರ್ದೇಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಕುರಿತಂತೆ ಮಾಡಲಾಗುತ್ತಿರುವ ಟ್ರೋಲ್‌ಗಳ ಬಗ್ಗೆ ಚಿತ್ರದ ನಿರ್ದೇಶಕ ಅದ್ವೈತ್‌ ಚಂದನ್ ಮಾತನಾಡಿದ್ದಾರೆ.

ಕೆಲವರು ಹಣ ಕೊಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಟ್ರೋಲ್‌ ಮಾಡಿಸುತ್ತಿದ್ದಾರೆ ಎಂದು ಅದ್ವೈತ್‌ ಚಂದನ್ ಹೇಳಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಂ ಸ್ಟೆಟಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:  ‘ಲಾಲ್ ಸಿಂಗ್ ಚಡ್ಡಾ’ ನಿರ್ಮಾಣಕ್ಕೆ 14 ವರ್ಷ: ಅಮೀರ್ ಖಾನ್ ಹೇಳಿದ್ದಿಷ್ಟು.. 

ಉದ್ದೇಶಪೂರ್ವಕವಾಗಿ ಕೆಲವರು ಹಣ ಕೊಟ್ಟು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ವಿರುದ್ಧ ಟ್ರೋಲ್‌ ಮಾಡುತ್ತಿದ್ದಾರೆ. ಈ ವಿಷಯ ನನಗೆ ಸಿನಿಮಾ ರಂಗದ ಆಪ್ತರಿಂದಲೇ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. 

ಕೆಲವು ದಿನಗಳ ಹಿಂದೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕರಿಸುವಂತೆ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಟ್ವಿಟರ್‌ನಲ್ಲಿ ಸಾವಿರಾರು ಪೋಸ್ಟ್‌ಗಳಿಗೆ #boycottlaalsinghchaddha ಮತ್ತು #boycottbollywood ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ನೀಡಲಾಗಿತ್ತು. 

ನಂತರದ ದಿನಗಳಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ವೀಕ್ಷಿಸುವಂತೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮನವಿ ಮಾಡಿದ್ದರು. ನಾನು ಭಾರತವನ್ನು ದ್ವೇಷಿಸುವ ವ್ಯಕ್ತಿ ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ, ಅದು ಶುದ್ಧ ಸುಳ್ಳು’ಎಂದು ಅಮೀರ್‌ ಖಾನ್‌ ಹೇಳಿದ್ದಾರೆ. 

1994ರ ಹಾಲಿವುಡ್ ಚಲನಚಿತ್ರ ‘ಫಾರೆಸ್ಟ್ ಗಂಪ್’ನ ರಿಮೇಕ್ ಇದಾಗಿದೆ.

ಇದನ್ನೂ ಓದಿ: ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು