ನ. 9ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಕ್ಷ್ಮಿ ಬಾಂಬ್ ಸಿನಿಮಾ ಬಿಡುಗಡೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ರಾಘವ ಲಾರೆನ್ಸ್ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಲಕ್ಷ್ಮಿ ಬಾಂಬ್’ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನವೆಂಬರ್ 9ರಂದು ಬಿಡುಗಡೆಯಾಗಲಿದೆ.
ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿತ್ತು. ಕೋವಿಡ್–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾತ್ತು. ಕೊನೆಗೆ, ಒಟಿಟಿಯಲ್ಲಿ ಚಿತ್ರ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದರು. ₹ 125 ಕೋಟಿಗೆ ಈ ಚಿತ್ರವನ್ನು ಖರೀದಿಸಲಾಗಿದೆಯಂತೆ. ಅಂದಹಾಗೆ ಒಟಿಟಿ ವೇದಿಕೆಗಳ ಇತಿಹಾಸದಲ್ಲಿಯೇ ದೊಡ್ಡ ಮೊತ್ತಕ್ಕೆ ಬಿಕರಿಯಾದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಭಾಜನವಾಗಿದೆ.
ಕಾಲಿವುಡ್‌ನಲ್ಲಿ ‘ಮುನಿ’ ಸಿನಿಮಾ ಮೂಲಕ ಸರಣಿ ಹಾರರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ರಾಘವ ಲಾರೆನ್ಸ್ ಬಿಟೌನ್‌ನಲ್ಲೂ ‘ಕಾಂಚನ’ಳ ಭಯಾನಕ ರೂಪ ತೋರಿಸುತ್ತಿದ್ದಾರೆ. ತಮಿಳಿನಲ್ಲಿ ಅವರು ‘ಮುನಿ’ ಚಿತ್ರದ ಸೀಕ್ವೆಲ್‌ಗೆ ‘ಕಾಂಚನ’ ಎಂಬ ಟೈಟಲ್ ಇಟ್ಟಿದ್ದರು. ಈ ಕಾಂಚನ ‘ಲಕ್ಷ್ಮಿ ಬಾಂಬ್’ ಹೆಸರಿನ ಮೂಲಕ ಹಿಂದಿಯಲ್ಲೂ ತನ್ನ ಅವತಾರ ಪ್ರದರ್ಶಿಸಲು ಸಜ್ಜಾಗಿದ್ದಾಳೆ.
ಇದರಲ್ಲಿ ಅಕ್ಷಯ್‌ಗೆ ಕಿಯಾರಾ ಅಡ್ವಾಣಿ ಜೋಡಿ. ಕೇಪ್ ಆಫ್ ಗುಡ್ ಫಿಲ್ಮ್ಸ್, ಫಾಕ್ಸ್ ಸ್ಟಾರ್ ಸ್ಟುಡಿಯೊಸ್, ಶಬಿನಾ ಎಂಟರ್‌ಟೈನ್‌ಮೆಂಟ್, ತುಷಾರ್ ಎಂಟರ್‌ಟೈನ್‌ಮೆಂಟ್ ಹೌಸ್‌ನಿಂದ ಇದನ್ನು ನಿರ್ಮಿಸಲಾಗಿದೆ.
‘ಸುದೀರ್ಘ ಸಮಯದ ಕಾಯುವಿಕೆ ಈಗ ಮುಗಿದಿದೆ. ಲಕ್ಷ್ಮಿ ಬಾಂಬ್ ಸಿನಿಮಾವನ್ನು ದೀಪಾವಳಿ ಹಬ್ಬದಂದು ನಗು ಮತ್ತು ಫನ್‌ನೊಟ್ಟಿಗೆ ನೋಡಿ ಸಂಭ್ರಮಿಸಿ’ ಎಂದು ರಾಘವ ಲಾರೆನ್ಸ್ ಟ್ವೀಟ್ ಮಾಡಿದ್ದಾರೆ.
Finally, the wait is over! Celebrate this Diwali with the explosion of laughter and fun.#LaxmmiBomb drops on 9th November only on @DisneyPlusHSVIP! #YehDiwaliLaxmmiBombWaali 💥 #DisneyPlusHotstarMultiplex @akshaykumar @advani_kiara @Shabinaa_Ent @TusshKapoor pic.twitter.com/gd3fg9Kygr
— Raghava Lawrence (@offl_Lawrence) September 16, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.