ಲಂಡನ್ನಿನ ಲಂಬೋದರನನ್ನು ಕೈ ಹಿಡಿದ ಪ್ರೇಕ್ಷಕ

ಗುರುವಾರ , ಏಪ್ರಿಲ್ 25, 2019
22 °C

ಲಂಡನ್ನಿನ ಲಂಬೋದರನನ್ನು ಕೈ ಹಿಡಿದ ಪ್ರೇಕ್ಷಕ

Published:
Updated:

ಕಳೆದ ವಾರ ಬಿಡುಗಡೆಯಾದ ‘ಲಂಡನ್‍ನಲ್ಲಿ ಲಂಬೋದರ’ ಹಾಸ್ಯ ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರಶಂಸೆ ಸಿಕ್ಕಿದೆಯಂತೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ ಬಹುತೇಕ ಆಸನಗಳು ಭರ್ತಿಯಾಗಿರುವುದು ಕಂಡುಬಂದಿದೆಯಂತೆ.

ಲಂಡನ್‍ದಲ್ಲಿ ಇಲ್ಲಿಯವರೆಗೂ 400 ಪ್ರದರ್ಶನ ಕಂಡಿದ್ದು, ಅಲ್ಲಿನ ಕನ್ನಡಿಗರು ಇಷ್ಟಪಟ್ಟಿದ್ದರಿಂದ ಹೆಚ್ಚಿನ ಕೇಂದ್ರಗಳಲ್ಲಿ ಸಿನಿಮಾವನ್ನು ಜನರಿಗೆ ತೋರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಆಸ್ಟ್ರೇಲಿಯಾ, ಜರ್ಮನಿ, ಯುಎಇ ಕಡೆಗಳಲ್ಲಿ ಮರುಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಕ್ಲೈಮ್ಯಾಕ್ಸ್‌ ಚೆನ್ನಾಗಿರುವುದು ಚಿತ್ರದ ಓಟಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಮಾಧ್ಯಮಗಳಲ್ಲಿ ಒಳ್ಳೆಯ ವಿಮರ್ಶೆ ಬಂದಿರುವ ಕಾರಣ ಚಿತ್ರಮಂದಿರದ ಗಳಿಕೆ ಹೆಚ್ಚಾಗುತ್ತಿದೆ ಎಂದು ಸಂಗೀತ ನಿರ್ದೇಶಕ ಪ್ರಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರ್ದೇಶಕ ರಾಜ್‍ಸೂರ್ಯ ಮೊದಲ ಪ್ರಯತ್ನದಲ್ಲೆ ಗೆಲುವು ದಕ್ಕಿರುವುದು ಭವಿಷ್ಯದಲ್ಲಿ ಉಪಯೋಗವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !