ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿರುವ ಭಾರತದ ಬ್ಯಾಟರ್ಗಳು, ತಂಡದ 'ರನ್ ಗಳಿಕೆ' ದಾಖಲೆಯನ್ನು ಉತ್ತಮಪಡಿಸಿದ್ದಾರೆ. ಹಾಗೆಯೇ, ಒಂದೇ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ತಂಡಗಳ ಪೈಕಿ ಟೀಂ ಇಂಡಿಯಾವನ್ನು ಎರಡನೇ ಸ್ಥಾನಕ್ಕೆ ಏರಿಸಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಭಾರತದ ಯುವ ಪಡೆ ಅಮೋಘ ಆಟವಾಡಿದೆ. ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿರುವ ಶುಭಮನ್ ಗಿಲ್ ಸೇರಿದಂತೆ ಒಟ್ಟು ಐವರು 400ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಉಳಿದವರೂ ಉಪಯುಕ್ತ ಆಟವಾಡಿರುವುದರ ಫಲವಾಗಿ ಇಡೀ ಟೂರ್ನಿಯಲ್ಲಿ ಭಾರತ ತಂಡ ಬರೋಬ್ಬರಿ 3,809 ರನ್ ಕಲೆಹಾಕಿದೆ.

1978-79ರಲ್ಲಿ ಇಂಗ್ಲೆಂಡ್ ವಿರುದ್ಧವೇ ನಡೆದಿದ್ದ ಆರು ಪಂದ್ಯಗಳ ಸರಣಿಯಲ್ಲಿ 3,270 ರನ್ ಕಲೆಹಾಕಿದ್ದು ಈವರೆಗೆ ದಾಖಲೆಯಾಗಿತ್ತು.
.ENG vs IND Test | 400ಕ್ಕಿಂತ ಅಧಿಕ ರನ್ ಗಳಿಸಿದ 9 ಬ್ಯಾಟರ್ಗಳು: ಇದೇ ಮೊದಲು!.ನಾನಾಗಿದ್ದರೆ ಆಕಾಶ್ ದೀಪ್ಗೆ ಗುದ್ದುತ್ತಿದ್ದೆ: ಪಾಂಟಿಂಗ್ ಹೀಗೆ ಹೇಳಿದ್ದೇಕೆ?.
ಸುವರ್ಣಾವಕಾಶ ಕೈಚೆಲ್ಲಿದ ಗಿಲ್ ಪಡೆ
ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ತಂಡ ಎನಿಸಿಕೊಳ್ಳುವ ಸುವರ್ಣಾವಕಾಶವನ್ನು ಶುಭಮನ್ ಗಿಲ್ ಪಡೆ ಕೇವಲ 68 ರನ್ ಅಂತರದಲ್ಲಿ ಕೈಚೆಲ್ಲಿತು.

1989ರ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 3,877 ರನ್ ಗಳಿಸಿರುವುದು ತಂಡವೊಂದರ ಗರಿಷ್ಠ ಸಾಧನೆಯಾಗಿದೆ. ಪ್ರಸಕ್ತ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕುವ ಅವಕಾಶ ಟೀಂ ಇಂಡಿಯಾಗೆ ಇತ್ತು.

ಈ ಪಟ್ಟಿಯಲ್ಲಿ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದ್ದು, 1928–29ರ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 3,757 ರನ್ ಕಲೆಹಾಕಿತ್ತು.

ಪ್ರಸಕ್ತ ಸರಣಿಯಲ್ಲಿ ಭಾರತ ಗಳಿಸಿದ ಮೊತ್ತ

* ಮೊದಲ ಟೆಸ್ಟ್ (ಲೀಡ್ಸ್): 471 ರನ್ ಹಾಗೂ 364 ರನ್
* ಎರಡನೇ ಟೆಸ್ಟ್ (ಬರ್ಮಿಂಗ್ಹ್ಯಾಮ್): 587 ರನ್ ಹಾಗೂ 6 ವಿಕೆಟ್ಗೆ 427 ರನ್
* ಮೂರನೇ ಟೆಸ್ಟ್ (ಲಾರ್ಡ್ಸ್): 387 ರನ್ ಹಾಗೂ 170 ರನ್
* ನಾಲ್ಕನೇ ಟೆಸ್ಟ್ (ಓಲ್ಡ್ ಟ್ರಾಫರ್ಡ್): 358 ಹಾಗೂ 4 ವಿಕೆಟ್ಗೆ 425 ರನ್
* ಐದನೇ ಟೆಸ್ಟ್ (ಕೆನ್ನಿಂಗ್ಟನ್ ಓವಲ್): 224 ರನ್ ಹಾಗೂ 396 ರನ್

ಟೆಸ್ಟ್ ಸರಣಿಯೊಂದರಲ್ಲಿ ಭಾರತದ ಗರಿಷ್ಠ ಮೊತ್ತಗಳು

* 3,809 ರನ್ vs ಇಂಗ್ಲೆಂಡ್ – 2025 (5 ಪಂದ್ಯಗಳು)
* 3,270 ರನ್ vs ವೆಸ್ಟ್ ಇಂಡೀಸ್ – 1978/79 (6 ಪಂದ್ಯಗಳು)
* 3,230 ರನ್ vs ಇಂಗ್ಲೆಂಡ್ – 2016/17 (5 ಪಂದ್ಯಗಳು)
* 3,140 ರನ್ vs ಇಂಗ್ಲೆಂಡ್ – 2023/24 (5 ಪಂದ್ಯಗಳು)
* 3,119 ರನ್ vs ಇಂಗ್ಲೆಂಡ್ – 1963/64 (5 ಪಂದ್ಯಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.