ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜೋತಾ ಭಂಡಾರಿ ನಿರ್ದೇಶನದ ‘ಲಂಗೋಟಿ ಮ್ಯಾನ್’ ಸೆ.20ಕ್ಕೆ ಬಿಡುಗಡೆ

Published : 6 ಸೆಪ್ಟೆಂಬರ್ 2024, 23:30 IST
Last Updated : 6 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಸಂಜೋತಾ ಭಂಡಾರಿ ನಿರ್ದೇಶನದ ‘ಲಂಗೋಟಿ ಮ್ಯಾನ್’ ಚಿತ್ರ ಸೆ.20ರಂದು ತೆರೆಗೆ ಬರಲಿದೆ. ಚಿತ್ರದ ‘ಲಂಗೋಟಿ ಬಲು ಒಳ್ಳೇದಣ್ಣ...’ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

‘ಸಿನಿಮಾ ಬಟ್ಟೆ ಕುರಿತಾದ ಕಥೆ ಹೊಂದಿದೆ. ಮನುಷ್ಯರು ಬಟ್ಟೆ ಧರಿಸಲು ಪ್ರಾರಂಭವಾಗಿದ್ದು ಲಂಗೋಟಿಯಿಂದ. ಅದಕ್ಕಾಗಿಯೇ ಈ ಶೀರ್ಷಿಕೆ ಇಡಲಾಗಿದೆ. ಎಲ್ಲ ಜಾತಿ, ಧರ್ಮದವರು ಲಂಗೋಟಿ ತೊಡುತ್ತಾರೆ. ಹೀಗಾಗಿ ಯಾರನ್ನು ನೋಯಿಸುವ ಉದ್ದೇಶ ಇಲ್ಲ. ಯುವಕರನ್ನು ಕೇಂದ್ರಿಕೃತವಾಗಿರುವ ಹಾಸ್ಯಮಯ ಚಿತ್ರ. ಈ ಚಿತ್ರದ ವಿಶೇಷವೆಂದರೆ ತಂಡದಲ್ಲಿ ಸಾಕಷ್ಟು ಮಹಿಳಾ ತಂತ್ರಜ್ಞರಿದ್ದಾರೆ’ ಎನ್ನುತ್ತಾರೆ ಸಂಜೋತ.

‘ಸಿಂಗಾರ ಸಿರಿಯೇ...’ ಖ್ಯಾತಿಯ ಪ್ರಮೋದ್ ಮರವಂತೆ ‘ಲಂಗೋಟಿ’ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುಮೆದ್ ಕೆ ಸಂಗೀತ ಸಂಯೋಜಿಸಿದ್ದಾರೆ. ಚೇತನ್ ನಾಯ್ಕ್ ಹಾಗೂ ಸುಮೆದ್ ಈ ಹಾಡಿಗೆ ದನಿಗೂಡಿಸಿದ್ದು.

ತನು ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಆಕಾಶ್ ರ‍್ಯಾಂಬೋ, ಸ್ನೇಹ ಖುಷಿ, ಸಂಹಿತಾ ವಿನ್ಯಾ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್‌ ಮುಂತಾದವರು ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT